ಟಿಪ್ಪರ್- ರಿಕ್ಷಾ ಢಿಕ್ಕಿ: ಐವರಿಗೆ ಗಾಯ

ಕೊಲ್ಲೂರು, ಮಾ.6: ವಂಡ್ಸೆ ಶ್ರೀದಾಮೋದರ್ ಜನರಲ್ ಸ್ಟೋರ್ ಬಳಿ ಮಾ.5ರಂದು ಸಂಜೆ ವೇಳೆ ಟಿಪ್ಪರೊಂದು ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಕಟ್ಟಿನಮಕ್ಕಿ ಕಡೆಯಿಂದ ಆಜ್ರಿ ಕಡೆಗೆ ಹೋಗುತ್ತಿದ್ದ ರಿಕ್ಷಾಕ್ಕೆ ಕುಂದಾಪುರ ಕಡೆಯಿಂದ ಕೊಲ್ಲೂರು ಕಡೆಗೆ ಬರುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆಯಿತು.
ಇದರಿಂದ ರಿಕ್ಷಾ ಚಾಲಕ ರಾಮ ದೇವಾಡಿಗ ಮತ್ತು ಪ್ರಯಾಣಿಕರಾದ ರಾಜೀವ ಶೆಟ್ಟಿ, ಪ್ರೇಮಾ, ಮಕ್ಕಳಾದ ಪ್ರತೀಕ್ಷಾ, ವಿದ್ಯಾ ಎಂಬವರು ಗಾಯಗೊಂಡರು.
ಇವರೆಲ್ಲ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿ ದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





