ಒಬಾಮರಿಂದ ಫೋನ್ ಕದ್ದಾಲಿಕೆ: ಟ್ರಂಪ್ ಆರೋಪ ತಳ್ಳಿಹಾಕಿದ ಎಫ್‌ಬಿಐ

ವಾಶಿಂಗ್ಟನ್, ಮಾ. 6: ತನ್ನ ಫೋನ್ ಕರೆಗಳನ್ನು ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕದ್ದಾಲಿಸಿದ್ದಾರೆ ಎಂಬುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಆರೋಪಗಳನ್ನು ಎಫ್‌ಬಿಐ ನಿರ್ದೇಶಕ ಜೇಮ್ಸ್ ಕಾಮಿ ಸುಳ್ಳು ಎಂಬುದಾಗಿ ಪರಿಗಣಿಸಿದ್ದಾರೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ರವಿವಾರ ವರದಿ ಮಾಡಿದೆ.
ಟ್ರಂಪ್‌ರ ಆಧಾರರಹಿತ ಆರೋಪವನ್ನು ಸಾರ್ವಜನಿಕವಾಗಿ ತಿರಸ್ಕರಿಸುವ ಮೂಲಕ ಸರಿಪಡಿಸುವಂತೆ ಕಾಮಿ ಕಾನೂನು ಇಲಾಖೆಯನ್ನು ಕೋರಿದ್ದಾರೆ ಎಂದು ಅಮೆರಿಕದ ಹಿರಿಯ ಅಧಿಕಾರಿಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.
‘‘ಈ ಆರೋಪವನ್ನು ಸಾಬೀತುಪಡಿಸುವ ಪುರಾವೆಯಿಲ್ಲ ಹಾಗೂ ಎಫ್‌ಬಿಐ ಕಾನೂನನ್ನು ಉಲ್ಲಂಘಿಸಿದೆ ಎಂಬ ಇಂಗಿತವನ್ನು ಅದು ವ್ಯಕ್ತಪಡಿಸುತ್ತದೆ’’ ಎಂಬುದಾಗಿ ಕಾಮಿ ಶನಿವಾರ ಕಾನೂನು ಇಲಾಖೆಗೆ ಹೇಳಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
Next Story





