ಅಮೆರಿಕದಲ್ಲಿ ಭಾರತೀಯರ ಕೊಲೆಯಾದರೂ ಮೋದಿ ಮೌನವೇಕೆ?
ಎಐಸಿಸಿ ಪ್ರದಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಟೀಕೆ

ಮಂಗಳೂರು.ಮಾ,6: ಅಮೆರಿಕದಲ್ಲಿ ಇಬ್ಬರು ಭಾರತೀಯರ ಕೊಲೆಯಾಗಿದೆ. ಕೆಲವರ ಮೇಲೆ ಹಲ್ಲೆ ನಡೆದಿದೆ ಆದರೂ ಭಾರತದ ಪ್ರಧಾನ ಮಂತ್ರಿ ಮೋದಿಯವರು ಈ ಬಗ್ಗೆ ಯಾವೂದೇ ಪ್ರತಿಕ್ರಿಯೆ ನೀಡದೆ ಮೌನವಹಿಸಿದ್ದಾರೆ ಎಂದು ರಾಜ್ಯ ಸಭಾ ಸದಸ್ಯ ಹಾಗೂ ಎಐಸಿಸಿ ಪ್ರದಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದಾರೆ.
ನೋಟು ಅಮಾನ್ಯಗೊಳಿಸಿದ ಸಂದರ್ಭದಲ್ಲಿ ಭಯೋತ್ಫಾದನೆಯ ನಿಗ್ರಹದ ಬಗ್ಗೆ ಮಾತನಾಡುತ್ತಿದ್ದ ಮೋದಿಯವರು ಭಾರತದ ಗಡಿಭಾಗದ ಕಾಶ್ಮಿರದಲ್ಲಿ ನಮ್ಮ ಯೋಧರು ಪಾಕಿಸ್ತಾನಿ ಉಗ್ರರ ಗುಂಡಿಗೆ ಬಲಿಯಾಗುತ್ತಿದ್ದರೂ ಯಾವೂದೇ ಚಕಾರ ಎತ್ತದೆ ಮೌನಕ್ಕೆ ಶರಣಾಗಿದ್ದಾರೆ ಎಂದು ಹರಿಪ್ರಸಾದ್ ಟೀಕಿಸಿದ್ದಾರೆ.
ಕೇರಳದ ಮುಖ್ಯ ಮಂತ್ರಿಯ ಕೊಲೆಗೆ ಗೃಹ ಸಚಿವರ ಸಮ್ಮಖದಲ್ಲಿಯೇ ಹೇಳಿಕೆ ನೀಡಿದರೂ ಪ್ರಕರಣ ದಾಖಲಿಸಿಲ್ಲ:
ಕೇರಳದ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಅವರ ಕೊಲೆ ಮಾಡಿದವರಿಗೆ ಒಂದು ಕೋಟಿ ಹಣವನ್ನು ನೀಡುವುದಾಗಿ ಮಧ್ಯಪ್ರದೇಶದ ಗೃಹ ಸಚಿವರ ಸಮ್ಮಖದಲ್ಲಿ ಸಂಘ ಪರಿವಾರದ ಮುಖಂಡನೊಬ್ಬ ಹೇಳಿಕೆ ನೀಡಿದಾಗಲೂ ಅಲ್ಲಿನ ಸರಕಾರ ಪ್ರಕರಣ ದಾಖಲಿಸಲು ಹಿಂದೇಟು ಹಾಕಿದೆ. ಮೋದಿಯವರು ಈ ಬಗ್ಗೆ ಪ್ರತಿಕ್ರೀಯೆ ನೀಡಿಲ್ಲ.ಈ ಬಗ್ಗೆ ಸಂಸತ್‌ನಲ್ಲಿ ವಿಷಯ ಪ್ರಸ್ತಾಪಿಸಲಾಗುವುದು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇರಳದ ಮುಖ್ಯ ಮಂತ್ರಿ ಆಗಮಿಸುವುದನ್ನು ವಿರೋಧಿಸಿದ ಸಂಘಪರಿವಾರದ ಪ್ರಯತ್ನದ ವಿರುದ್ಧ ಕರ್ನಾಟಕ ಸರಕಾರ ಸೂಕ್ತ ಕ್ರಮ ಕೈ ಗೊಂಡಿರುವುದು ಶ್ಲಾಘನೀಯ ದ.ಕ ಜಿಲ್ಲಾ ಪೊಲೀಸರನ್ನು ಅಭಿನಂದಿಸುವುದಾಗಿ ಹರಿಪ್ರಸಾದ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಚುನಾವಣೆಯ ಸಂದರ್ಭದಲ್ಲಿ ನೀಡಿದ ಬಹುತೇಕ ಭರವಸೆಗಳನ್ನು ಈಗಾಗಲೇ ಇಡೇರಿಸಿ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ.ಆದರೆ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ನರೇಂದ್ರ ಮೋದಿ ಸರಕಾ ಮೂರು ವರ್ಷ ಪೂರೈಸುತ್ತಿರುವ ಹಂತದಲ್ಲಿ ವಿದೇಶದಿಂದ ಕಪ್ಪು ಹಣ ತರುತ್ತೇನೆ. ಭೃಷ್ಟಾಚಾರ ಕೊನೆಗೊಳಿಸುತ್ತೆನೆ ಎಂದು ಹಲವು ಭರವಸೆ ನೀಡಿದ್ದಾರೆ.ಯಾವ ಭರವಸೆಯನ್ನು ಈಡೇರಿಸಿರುವುದಿಲ್ಲ. ಅದನ್ನು ಮುಚ್ಚಿಹಾಕಲು ನೋಟು ಅಮಾನ್ಯ ಗೊಳಿಸುವ ತಂತ್ರ ನಡೆಸಿದ್ದಾರೆ. ಆದರೆ ಅದರಲ್ಲೂ ಯಶಸ್ಸು ಪಡೆಯಲು ಸಾಧ್ಯವಾಗಿಲ್ಲ ಎಂದು ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.
ಯಡಿಯೂರಪ್ಪ ಮತ್ತೆ ಸಿ.ಎಂ ಆಗುವುದು ತಿರುಕನ ಕನಸು:
ದೇಶದಲ್ಲಿ ಮುಖ್ಯ ಮಂತ್ರಿಯಾಗಿ ಜೈಲು ಸೇರಿದ ಯಡಿಯೂರಪ್ಪ ಮತ್ತೆ ರಾಜ್ಯದ ಮುಖ್ಯ ಮಂತ್ರಿ ಯಾಗುವುದು ತಿರುಕನ ಕನಸು.ಯಡಿಯೂರಪ್ಪ ಕಂಪೆನಿಯೊಂದರಿಂದ 20 ಕೋಟಿ ರೂ ಹಣವನ್ನು ತನ್ನ ಖಾತೆಗೆ ಪಡೆದಿರುವ ಬಗ್ಗೆ ಆರೋಪವನ್ನು ಎದುರಿಸುತ್ತಿದ್ದಾರೆ.ಅದನ್ನು ಮರೆಮಾಚಲು ಸಿದ್ದರಾಮಯ್ಯರ ಮೇಲೆ ಡೈರಿ ವಿಷಯದಲ್ಲಿ ಆರೋಪ ಮಾಡುತ್ತಿದ್ದಾರೆ.ಡೈರಿ ಬಗ್ಗೆ ಆರೋಪ ಮಾಡುವುದಾದರೆ ಮೋದಿಯವರಿಗೆ 40 ಕೋಟಿ ರೂ ಲಂಚ ನೀಡಿದ ಆರೋಪದ ಬಗ್ಗೆಯೂ ತನಿಖೆಯಾಗಬೇಕಿತ್ತು ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ಶಾಸಕ ಮೊಯ್ದಿನ್ ಬಾವ,ಎಐಸಿಸಿ ಸದಸ್ಯರಾದ ಪಿ.ವಿ.ಮೋಹನ್, ಮನಪಾ ಸದಸ್ಯರಾದ ಕವಿತಾ ಸನಿಲ್, ಅಬ್ದುಲ್ ರವೂಫ್, ರಾಧಾಕೃಷ್ಣ ಹಾಗೂ ಇತರ ಕಾಂಗ್ರೆಸ್ ಪದಾಧಿಕಾರಿಗಳಾದ ವಿಜಯ ಕುಮಾರ್ ಸೊರಕೆ,ಸಂತೊಷ್ ಶೆಟ್ಟಿ, ಟಿ.ಕೆ.ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.







