ಮೂರು ಲಾರಿ ಸೇರಿದಂತೆ ಇಬ್ಬರು ಪೊಲೀಸ್ ವಶಕ್ಕೆ
ಬಾಳೆಪುಣಿ: ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಾಟ
ಕೊಣಾಜೆ, ಮಾ.6: ಕೊಣಾಜೆ ಠಾಣಾ ವ್ಯಾಪ್ತಿಯ ಮುದುಂಗಾರು ಕಟ್ಟೆ, ಬಾಳೆಪುಣಿ, ಕಡ್ವಾಯಿ ಬಳಿ ಅಕ್ರಮವಾಗಿ ಕೇರಳರಾಜ್ಯಕ್ಕೆ ಮರಳು ಸಾಗಾಟ ಮಾಡುತ್ತಿದ್ದ ಮೂರು ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಇಬ್ಬರು ಚಾಲಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಪೊಲೀಸರು ಟಿಪ್ಪರ್ ಮಾಲಕರು ಹಾಗೂ ಲೀಸ್ ಮಾಲಕರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಚಾಲಕರಾದ ವರ್ಕಾಡಿ ಕಜೆಯ ಅಬ್ಬಾಸ್ ಹಾಗೂ ಬಾಳೆಪುಣಿ ಮೂಳೂರಿನ ನಾಸೀರುದ್ದೀನ್ ಎಂದು ಗುರುತಿಸಲಾಗಿದೆ.
ಕೇರಳ ಕರ್ನಾಟಕ ಗಡಿ ಭಾಗವಾದ ಬಾಳೆಪುಣಿ, ಮುದುಂಗಾರು ಕಟ್ಟೆ, ಕಡ್ವಾಯಿ ಬಳಿ ಅಕ್ರಮವಾಗಿ ಕೇರಳಕ್ಕೆ ಮರಳು ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಮೂರು ಲಾರಿಗಳನ್ನು ವಶಕ್ಕೆ ಪಡೆದಿದ್ದರು.
ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Next Story





