ಮೀನುಗಾರ ಮಹಿಳೆಯರಿಗೆ ಮೀನು ಒಣಗಿಸಲು 24 ಶೆಡ್ ಗಳ ನಿರ್ಮಾಣ : ಶಾಸಕ ಜೆ.ಆರ್.ಲೋಬೊ

ಮಂಗಳೂರು, ಮಾ. 6: ಮೀನುಗಾರ ಮಹಿಳೆಯರಿಗೆ ಬೆಂಗ್ರೆಯಲ್ಲಿ 3ನೇ ಹಂತದ ಕಾಮಗಾರಿಯಲ್ಲಿ ಮೀನು ಒಣಗಿಸಲು ಅನುಕೂಲವಾಗುವಂತೆ 24 ಶೆಡ್‌ಗಳನ್ನು ನಿರ್ಮಿಸಿ ಕೊಡುವುದಾಗಿ ಶಾಸಕ ಜೆ.ಆರ್.ಲೋಬೊ ತಿಳಿಸಿದರು.
ಅವರು ಕಸಬಾ ಬೆಂಗ್ರೆಯಲ್ಲಿ ನಡೆದ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಈ ಶೆಡ್‌ಗಳನ್ನು 47 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿ ಕೊಡುವುದಾಗಿ ಹೇಳಿದರು. ಮೀನುಗಾರ ಮಹಿಳೆಯರು ಮೀನು ಒಣಗಿಸಲು ಸರಿಯಾದ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಈ ಉದ್ದೇಶದಿಂದ ಸರಕಾರದ ಅನುದಾನ ಪಡೆದು ಈ ವ್ಯವಸ್ಥೆ ಮಾಡುವುದಾಗಿ ಹೇಳಿದಲ್ಲದೆ, ಬೆಂಗ್ರೆಯನ್ನು ತನ್ನ ಅಧಿಕಾರಾವಧಿಯಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸುವುದಾಗಿ ಶಾಸಕರು ಇದೇ ಸಂದರ್ಭದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಬೆಂಗ್ರೆ ಜನರ ಪರವಾಗಿ ಶಾಸಕ ಲೋಬೊರನ್ನು ಸನ್ಮಾನಿಸಲಾಯಿತು.
Next Story





