ಕಾಪು: ಮೂಳೂರಿನಲ್ಲಿ ಆರೋಗ್ಯ ತಪಾಸಣಾ ಶಿಬಿರ,
ಕಾಪು, ಫೆ.6: ಮೂಳೂರು ಜುಮಾ ಮಸೀದಿ, ಅಂಜುಮಾನ್ ಖಾದಿ ಮುಲ್ ಮುಸ್ಲಿಮೀನ್ ದಫ್ ಕಮಿಟಿಯ 40ನೆ ವಾರ್ಷಿಕೋತ್ಸವದ ಅಂಗ ವಾಗಿ ಕಾಪು ನರ್ಸಿಂಗ್ ಹೋಮ್‌ನ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ರವಿವಾರ ಮಸೀದಿ ವಠಾರದಲ್ಲಿ ಏರ್ಪಡಿಸಲಾಗಿತ್ತು.
ಶಿಬಿರವನ್ನು ಮೂಳೂರು ಜುಮಾ ಮಸೀದಿಯ ಖತೀಬ್ ಅಲ್‌ಹಾಜ್ ಅಬ್ದುರ್ರಹ್ಮಾನ್ ಮದನಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮಸೀದಿ ಅಧ್ಯಕ್ಷ ಎಂ.ಎಚ್.ಬಿ.ಮುಹಮ್ಮದ್ ವಹಿಸಿದ್ದರು. ಅದಾನಿ ಯುಪಿಸಿಎಲ್‌ನ ನಿರ್ದೇಶಕ ಕಿಶೋರ್ ಆಳ್ವ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಕಾಪು ಪುರಸಭೆ ಉಪಾಧ್ಯಕ್ಷ ಕೆ.ಎಚ್. ಉಸ್ಮಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಅದ್ದು, ಮಸೀದಿ ಗೌರವಾಧ್ಯಕ್ಷ ಹಾಜಿ ಅಬ್ದುರ್ರಝಾಕ್ ಶಾಬಾನ್ ಮುಖ್ಯ ಅತಿಥಿಗಳಾಗಿದ್ದರು.
ಕಾಪು ನರ್ಸಿಂಗ್ ಹೋಮ್‌ನ ವೈದ್ಯಕೀಯ ನಿರ್ದೇಶಕ ಡಾ.ಸಿಬ್ಗತುಲ್ಲ ಶರೀಫ್ ಆರ್., ದಫ್ ಕಮಿಟಿಯ ಅಧ್ಯಕ್ಷ ಹಾಜಿ ಎಂ.ಅಬ್ಬು ಮುಹಮ್ಮದ್, ಕಾರ್ಯದರ್ಶಿ ಎಂ.ಎಸ್.ಮುಹಮ್ಮದ್ ಶಾಬಾನ್ ಉಪಸ್ಥಿತರಿದ್ದರು.
ಮಸೀದಿಯ ಸಹಾಯಕ ಖತೀಬ್ ಹೈದರ್ ಅಲಿ ಅಹ್ಸನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈ.ಬಿ.ಸಿ.ಬಶೀರ್ ಸ್ವಾಗತಿಸಿದರು. ಎಂ.ಎ.ಬಾವು ಕಾರ್ಯ ಕ್ರಮ ನಿರೂಪಿಸಿದರು.
ನರ್ಸಿಂಗ್ ಹೋಮ್‌ನ ಡಾ.ಹಾರೀಸ್, ಡಾ.ಮುಹಮ್ಮದ್ ಕಮರ್ ಅಲಿ, ಡಾ.ಪಿ.ಕೆ.ಶ್ರೀವಾಸ್ತವ್, ಡಾ.ಸುಶಾಂತ್ ಶೆಟ್ಟಿ, ಡಾ.ಜಿ.ಎಂ.ಕಾಂತಿ, ಡಾ. ಅನ್ಲಾ ಶೆಟ್ಟಿ, ಡಾ.ಮಸ್ಸೂದ ಫಾತಿಮಾ ವೈದ್ಯಕೀಯ ತಪಾಸಣೆ ನಡೆಸಿದರು.
ಮೂಳೂರು ಪರಿಸರದ ಎಲ್ಲ ಧರ್ಮದ ಸುಮಾರು 350ಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.







