ಮಹಿಳೆಗೆ ಬೆದರಿಕೆ: ದೂರು
ಪುತ್ತೂರು, ಮಾ.6: ಆಸ್ತಿ ವಿಚಾರಕ್ಕೆ ಸಂಬಂಧಿಸಿ ವಿಧವೆ ಮಹಿಳೆಯೋರ್ವರ ಮನೆಗೆ ಆಕೆಯ ಬಾವ ಅಕ್ರಮವಾಗಿ ಪ್ರವೇಶಿಸಿ ಕಿರುಕುಳ ನೀಡುತ್ತಾ ಬೆದರಿಕೆಯೊಡುತ್ತಿರುವ ಕುರಿತು ಸಂಪ್ಯ ಪೊಲೀಸರಿಗೆ ದೂರು ನೀಡಲಾಗಿದೆ.
ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಕನ್ನಡಮೂಲೆ ನಿವಾಸಿ ಐಸಮ್ಮ ಎಂಬವರು ಆಕೆಯ ಬಾವ (ಪತಿಯ ಅಣ್ಣ) ತಿಂಗಳಾಡಿ ನಿವಾಸಿ ಇಸ್ಮಾಯೀಲ್ ಎಂಬವರ ವಿರುದ್ದ ದೂರು ನೀಡಿದ್ದಾರೆ. ಐಸಮ್ಮ ಅವರ ಪತಿ ರಸ್ತೆ ಅಘಘಾತವೊಂದರಲ್ಲಿ ಮೃತಪಟ್ಟಿದ್ದು, ಮಕ್ಕಳಿಲ್ಲದ ಅವರು ತನ್ನ ಪತಿಗೆ ಸೇರಿದ ಕನ್ನಡಮೂಲೆ ಎಂಬಲ್ಲಿನ ಜಾಗದಲ್ಲಿ ವಾಸವಾಗಿದ್ದಾರೆ. ಸುಮಾರು ಒಂದು ಕಾಲು ಎಕ್ರೆ ಜಾಗ ಅವರ ವಶದಲ್ಲಿದ್ದು, ಈ ಜಾಗವನ್ನು ಬಿಟ್ಟುಕೊಡಬೇಕೆಂದು ಪೀಡಿಸುತ್ತಾ ಐಸಮ್ಮ ಅವರಿಗೆ ಅವರ ಪತಿಯ ಅಣ್ಣ ಇಸ್ಮಾಯೀಲ್ ಎಂಬವರು ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಲಾಗಿದೆ.
ಇಸ್ಮಾಯೀಲ್ ಅವರು ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ, ಬೆದರಿಕೆಯೊಡ್ಡಿ ಮನೆಯಿಂದ ಹೊರದಬ್ಬಲು ಯತ್ನಿಸಿರುವುದಾಗಿ ಆರೋಪಿಸಿ ಐಸಮ್ಮ ಸಂಪ್ಯ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Next Story





