ಯುವತಿ ಆತ್ಮಹತ್ಯೆ ಪ್ರಕರಣ: ಓರ್ವನ ಬಂಧನ
ಕಾಸರಗೋಡು, ಮಾ.6: ನಿರುಪಯುಕ್ತ ಟ್ಯಾಂಕ್‌ನಲ್ಲಿ ಯುವತಿಯೋರ್ವಳು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೋರ್ವನನ್ನು ಬಂಧಿಸಿದ ಘಟನೆ ವರದಿಯಾಗಿದೆ.
ಅಜಿತ್(23)ಬಂಧಿತ ವ್ಯಕ್ತಿ. ಮಾ.3ರಂದು ಕ್ಷೇತ್ರವೊಂದರ ಉತ್ಸವಕ್ಕೆಂದು ತೆರಳಿದ್ದ ರೇವತಿ ಮನೆಗೆ ಮರಳಿರಲಿಲ್ಲ. ಇದರಿಂದ ಮನೆಯವರು ಶೋಧ ನಡೆಸಿದಾಗ ಮನೆಯ ಅಲ್ಪದೂರದ ಉಪಯೋಗವಿಲ್ಲದ ನೀರಿನ ಟ್ಯಾಂಕ್‌ನಲ್ಲಿ ಮೃತದೇಹ ಪತ್ತೆಯಾಗಿತ್ತು. ಘಟನೆಗೆ ಸಂಬಂಧಿಸಿ ಅಜಿತ್ ಕುಮಾರ್‌ನ ಬಗ್ಗೆ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದರು.
ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಅಜಿತ್‌ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈತ ನಿರಂತರ ಕಿರುಕುಳ ನೀಡುತ್ತಿದ್ದನೆನ್ನಲಾಗಿದೆ, ಕಿರುಕುಳ ತಡೆಯಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತನಿಖೆಯಿಂದ ತಿಳಿದು ಬಂದಿದೆ.
Next Story





