ಆಂಬುಲೆನ್ಸ್ ವಿಮಾನಕ್ಕೇ ಬಿತ್ತು ಬೆಂಕಿ!

ಬ್ಯಾಂಕಾಕ್, ಮಾ.7: ಮೇದಾಂತ ಆಸ್ಪತ್ರೆಯ ಆಂಬುಲೆನ್ಸ್ ವಿಮಾನಕ್ಕೆ ಬೆಂಕಿ ತಗುಲಿದ ಪರಿಣಾಮ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಘಟನೆ ಬ್ಯಾಂಕಾಕ್‌ನಲ್ಲಿ ನಡೆದಿದೆ. ಐದು ಮಂದಿ ಸಿಬ್ಬಂದಿ ಹೊಂದಿದ್ದ ವಿಮಾನ ತುರ್ತುಭೂಸ್ಪರ್ಶವಾದಾಗ ವಿಮಾನದ ಪೈಲಟ್ ಮೃತಪಟ್ಟಿದ್ದಾನೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ಪೈಲಟ್ ಅರುಣಾಕ್ಷ ನಂದಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಡಾ.ಶೈಲೇಂದ್ರ ಹಾಗೂ ಡಾ.ಕೋಮಲ್ ಎಂಬ ಇಬ್ಬರು ವೈದ್ಯರು ತೀವ್ರವಾಗಿ ಗಾಯಗೊಂಡು ಬ್ಯಾಂಕಾಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳನ್ನು ಸೇನಾ ಹೆಲಿಕಾಪ್ಟರ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ.
Next Story





