ಲಂಕಾ ಸೈನಿಕರಿಂದ ಗುಂಡಿನ ದಾಳಿ; ಭಾರತದ ಓರ್ವಮೀನುಗಾರ ಸಾವು

ಮಧುರೈ, ಮಾ.7:ಭಾರತೀಯ ಸಮುದ್ರ ಗಡಿಯಲ್ಲಿ ಮೀನು ಹಿಡಿಯುತ್ತಿದ್ದ ಮೀನುಗಾರರ ಮೇಲೆ ಶ್ರೀಲಂಕಾ ನೌಕಾದಳದ ಸೈನಿಕರು ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮವಾಗಿ ಭಾರತ ಓರ್ವ ಮೀನುಗಾರ ಮೃತಪಟ್ಟಿದ್ದಾರೆ.
ತಂಗಾಚಿಮಾಡಮ್‌ನ ಬ್ರಿಟ್ಸೊ ( 22 ) ಎಂಬವರು ಲಂಕಾ ಸೈನಿಕರ ಗುಂಡಿನ ದಾಳಿಯಿಂದ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು. ಇಬ್ಬರು ಮೀನುಗಾರರು ಗಾಯಗೊಂಡಿದ್ದಾರೆ. ಇವರಲ್ಲಿ ಸರವಣನ್ ಎಂಬವರ ಕಾಲಿಗೆ ಗುಂಡೇಟು ತಗುಲಿದೆ ಎಂದು ತಿಳಿದು ಬಂದಿದೆ.
ರಾಮೇಶ್ವರಂ ಸಮೀಪದಲ್ಲಿರುವ ಕಚ್ಚಾತೀವು ದ್ವೀಪ ಪ್ರದೇಶದ ಭಾರತದ ಸಮುದ್ರಗಡಿಯಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಮೀನುಗಾರರು ಮೀನು ಹಿಡಿಯುತ್ತಿದ್ದರು. ಈ ವೇಳೆ ಲಂಕಾ ಸೈನಿಕರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. .
ಈ ಸಂಬಂಧ ರಾಮೇಶ್ವರಂನ ಜೆಟ್ಟಿ ಪೊಲೀಸ್ ನಿಲ್ದಾಣದಲ್ಲಿ ಪ್ರಕರಣ ದಾಖಲಾಗಿದೆ.
Next Story





