ಎರಡನೆ ಕ್ರಿಕೆಟ್ ಟೆಸ್ಟ್ :ಆಸ್ಟ್ರೇಲಿಯದ ಗೆಲುವಿಗೆ 188 ರನ್ ಸವಾಲು

ಸ್ಟಾರ್ಕ್ ಎಸೆತದಲ್ಲಿ ಕರುಣ್ ನಾಯರ್ ಬೌಲ್ಡ್ .
ಬೆಂಗಳೂರು, ಮಾ.7: ಇಲ್ಲಿ ನಡೆಯುತ್ತಿರುವ ಎರಡನೆ ಕ್ರಿಕೆಟ್ ಟೆಸ್ಟ್ ನಲ್ಲಿ ಭಾರತದ ವಿರುದ್ಧ ಪ್ರವಾಸಿ ಆಸ್ಟ್ರೇಲಿಯ ತಂಡ 188 ರನ್ ಗಳ ಸುಲಭದ ಸವಾಲು ಪಡೆದಿದೆ.
ಭಾರತ ಎರಡನೆ ಇನಿಂಗ್ಸ್ ನಲ್ಲಿ 97.1 ಓವರ್ ಗಳಲ್ಲಿ 274 ರನ್ ಗಳಿಗೆ ಆಲೌಟಾಗಿದೆ.
ಹೇಝಲ್ ವುಡ್(67ಕ್ಕೆ6), ಮಿಷೆಲ್ ಸ್ಟಾರ್ಕ್ (74ಕ್ಕೆ 2) ಮತ್ತು ಓ'ಕೀಫೆ(36ಕ್ಕೆ 2) ದಾಳಿಗೆ ಸಿಲುಕಿ ಭಾರತದ ದಾಂಡಿಗರು ಬೇಗನೆ ಎರಡನೆ ಇನಿಂಗ್ಸ್ ಮುಗಿಸಿದ್ದಾರೆ.
ಚೇತೇಶ್ವರ ಪೂಜಾರ(92) ಶತಕ ವಂಚಿತಗೊಂಡರು. ಅಜಿಂಕ್ಯ ರಹಾನೆ 52 ರನ್, ವೃದ್ಧಿಮಾನ್ ಸಹಾ ಔಟಾಗದೆ 20 ರನ್ ಗಳಿಸಿದರು. ಕರ್ನಾಟಕದ ಕರುಣ್ ನಾಯರ್(0) ತಾನೆದುರಿಸಿದ ಮೊದಲ ಎಸೆತದಲ್ಲೇ ಬೌಲ್ಡ್ ಆಗಿ ಸ್ಟಾರ್ಕ್ ಗೆ ಒಪ್ಪಿಸಿದರು. ಅಶ್ವಿನ್ 4ರನ್, ಉಮೇಶ್ ಯಾದವ್ 1ರನ್ ಮತ್ತು ಇಶಾಂತ್ ಶರ್ಮ 6 ರನ್ ಗಳಿಸಿ ಔಟಾದರು.
Next Story





