‘ನಂಡೆ ಪೆಂಙಳ್’ ಅಭಿಯಾನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ನೌಶಾದ್ ಹಾಜಿ ಸೂರಲ್ಪಾಡಿ

ಮಂಗಳೂರು, ಮಾ.7: ಮೂವತ್ತು ವರ್ಷ ದಾಟಿದರೂ ವಿವಿಧ ಕಾರಣಗಳಿಂದಾಗಿ ವಿವಾಹವಾಗದೇ ಉಳಿದಿರುವ ದ.ಕ. ಜಿಲ್ಲೆಯ ಮುಸ್ಲಿಂ ಮಹಿಳೆಯರಿಗೆ ವಿವಾಹ ಭಾಗ್ಯ ನೀಡುವ ವಿಶಿಷ್ಟ ಯೋಜನೆ ‘ನಂಡೆ ಪೆಂಙಳ್’ ಅನ್ನು ಟ್ಯಾಲೆಂಟ್ ರಿಸರ್ಚ್ ಫೌಂಡೇಷನ್ ಇತ್ತೀಚೆಗೆ ಪ್ರಾರಂಭಿಸಿರುವ ‘ನಂಡೆ ಪೆಂಙಳ್’ ಅಭಿಯಾನದ ನೂತನ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯ ಅಧ್ಯಕ್ಷರಾಗಿ ನೌಶಾದ್ ಹಾಜಿ ಸೂರಲ್ಪಾಡಿ ಆಯ್ಕೆಯಾಗಿದ್ದಾರೆ.
ಮುಖ್ಯ ಸಲಹೆಗಾರರಾಗಿ ಎಸ್.ಎಂ ರಶೀದ್ ಹಾಜಿ, ಗೌರವಾಧ್ಯಕ್ಷರಾಗಿ ಝಕರಿಯಾ ಜೋಕಟ್ಟೆ, ಉಪಾಧ್ಯಕ್ಷರುಗಳಾಗಿ ಹಾಜಿ ಬಿ.ಎಂ. ಮುಮ್ತಾಝ್ ಅಲಿ, ಅಸ್ಗರ್ ಅಲಿ, ಅಶ್ರಫ್ ಕರ್ನಿರೆ, ಪ್ರಧಾನ ಕಾರ್ಯದರ್ಶಿಯಾಗಿ ಮನ್ಸೂರ್ ಅಹ್ಮದ್, ಕಾರ್ಯದರ್ಶಿಗಳಾಗಿ ನಿಸಾರ್ ಮುಹಮ್ಮದ್, ಮುಹಮ್ಮದ್ ಹಾರಿಸ್, ಕೋಶಾಧಿಕಾರಿಯಾಗಿ ಅಬ್ದುಲ್ ರವೂಫ್ ಪುತ್ತಿಗೆ, ಮಾಧ್ಯಮ ಕಾರ್ಯದರ್ಶಿಯಾಗಿ ಉಮ್ಮರ್ ಯು.ಎಚ್, ಸಂಘಟನಾ ಕಾರ್ಯದರ್ಶಿಯಾಗಿ ರಿಯಾಝ್ ಅಹ್ಮದ್ ಕಣ್ಣೂರ್, ಪ್ರಚಾರ ಮುಖ್ಯಸ್ಥರಾಗಿ ರಫೀಕ್ ಮಾಸ್ಟರ್, ಸಂಪನ್ಮೂಲ ಬಳಗದ ಮುಖ್ಯಸ್ಥರಾಗಿ ಎ.ಕೆ ನಿಯಾಝ್, ಸಮೀಕ್ಷೆ ಬಳಗದ ಮುಖ್ಯಸ್ಥರಾಗಿ ಹಮೀದ್ ಕಣ್ಣೂರ್, ಪರಿಶೀಲನೆ ಮತ್ತು ಠರಾವಣೆಗಾರರಾಗಿ ಸುಲೈಮಾನ್ ಶೇಕ್, ಆಂತರಿಕ ಲೆಕ್ಕ ಪರಿಶೋಧಕರಾಗಿ ಬಿ. ಎ. ಮುಹಮ್ಮದ್ ಅಲಿ ಎನ್ನೆಂಪಿಟಿ, ಸಂಚಾಲಕರಾಗಿ ಮುಹಮ್ಮದ್ ಯು.ಬಿ ಅವರನ್ನು ಆಯ್ಕೆ ಮಾಡಲಾಯಿತು.





