ಭಯೋತ್ಪಾದನೆ: ಭಾರತಕ್ಕೆ ಪ್ರವಾಸ ಹೋಗುವವರಿಗೆ ಎಚ್ಚರಿಕೆ ನೀಡಿದ ಅಮೆರಿಕ
.jpg)
ವಾಷಿಂಗ್ಟನ್,ಮಾ.7: ಭಾರತ ಸಹಿತ ಕೆಲವು ದೇಶಗಳಿಗೆ ಪ್ರವಾಸ ಹೋಗುವ ಅಮೆರಿಕನ್ ಪ್ರಜೆಗಳಿಗೆ ಅಮೆರಿಕ ಎಚ್ಚರಿಕೆನೀಡಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮುಂತಾದ ದೇಶಗಳ ಜೊತೆಗೆ ಭಾರತದಲ್ಲಿಯೂ ಭಯೋತ್ಪಾದಕರಿದ್ದಾರೆ ಎಂದು ಅಮೆರಿಕ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ.
ಭಾರತದಲ್ಲಿ ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿವೆ. ಭಾರತಕ್ಕೆ ಹೋಗುವವರು ಇದನ್ನು ಗಮನಿಸಬೇಕೆಂದು ಇತ್ತೀಚೆಗೆ ಅಮೆರಿಕದ ರಾಜ್ಯಇಲಾಖೆ ಮುನ್ನೆಚ್ಚರಿಕೆ ನೀಡಿದೆ.ದಕ್ಷಿಣ ಏಶ್ಯದಲ್ಲಿ ಅಮೆರಿಕದ ನೀತಿಗಳಿಗೂ ಪ್ರಜೆಗಳಿಗೂ ವಿರುದ್ಧ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಅಮೆರಿಕ ಭಾವಿಸಿದೆ. ಆದ್ದರಿಂದ ಈ ದೇಶಗಳಿಗೆ ತನ್ನ ಪ್ರಜೆಗಳು ಪ್ರವಾಸ ಹೋಗುವ ಕುರಿತು ಅದು ಮುನ್ನೆಚ್ಚರಿಕೆ ನೀಡಿದೆ.
ಬಾಂಗ್ಲಾದೇಶದಲ್ಲಿ ಹಲವಾರು ಭಯೋತ್ಪಾದನಾ ದಾಳಿ ನಡೆದಿರುವುದನ್ನು ಅಮೆರಿಕದ ರಾಜ್ಯಇಲಾಖೆ ತನ್ನ ಆದೇಶದಲ್ಲಿ ಬೆಟ್ಟು ಮಾಡಿ ತೋರಿಸಿದೆ ಅದರಲ್ಲೂ ಅಮೆರಿಕನ್ ಪ್ರಜೆಗಳು ಅಫ್ಘಾನಿಸ್ತಾನ ಪ್ರವಾಸವನ್ನು ಕೈಬಿಡಬೇಕು ಎಂದು ಸೂಚಿಸಲಾಗಿದೆ. ಅಫ್ಘಾನಿಸ್ತಾನದಲ್ಲಿ ದಾಳಿ ನಡೆಯದ ಸ್ಥಳವಿಲ್ಲ ಎಂದು ಮುನ್ನೆಚ್ಚರಿಕೆಯಲ್ಲಿ ವಿವರಿಸಲಾಗಿದೆ.
ಪಾಕಿಸ್ತಾನದಲ್ಲಿ ಜಗತ್ತಿನಾದ್ಯಂತ ಬೇರಿರುವ ಭಯೋತ್ಪಾದನಾ ಸಂಘಟನೆಗಳು ಮತ್ತು ಸ್ಥಳೀಯ ಉಗ್ರ ಸಂಘಟನೆಗಳು ಹಾಗೂ ಇತರ ಭಯೋತ್ಪಾದಕರಿದ್ದು, ಇವರು ಅಮೆರಿಕನ್ ಪ್ರಜೆಗಳಿಗೆ ಬೆದರಿಕೆಯೊಡ್ಡಬಹುದೆಂದು ರಾಜ್ಯಇಲಾಖೆ ಹೊರಡಿಸಿದ ಎಚ್ಚರಿಕೆಯಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ.







