ಹಿಂದೂಗಳು ಹುಟ್ಟು ಹಬ್ಬ ಕೇಕ್ ಕತ್ತರಿಸಿ ಆಚರಿಸಬಾರದು : ಕೇಂದ್ರ ಸಚಿವ ಗಿರಿರಾಜ್ ಸಿಂಗ್
.jpg)
ಪಾಟ್ನ,ಮಾ.7: ಹಿಂದೂಗಳು ಹುಟ್ಟಿದ ಹಬ್ಬಕ್ಕೆ ಕೇಕ್ ಕತ್ತರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕೆಂದು ಕೇಂದ್ರ ಸಚಿವ ಗಿರಿರಾಜ್‌ಸಿಂಗ್ ಹೇಳಿದ್ದಾರೆ. ಇಂತಹ ಆಚಾರ ಭಾರತ ಸಂಸ್ಕೃತಿಗೆ ಸೇರಿಲ್ಲ. ದುರದೃಷ್ಟವಶಾತ್ ಭಾರತೀಯರು ಹುಟ್ಟು ಹಬ್ಬ ಆಚರಿಸುವಾಗ ಈ ಪಾಶ್ಚಾತ್ಯ ಸಂಸ್ಕಾರವನ್ನು ಅಳವಡಿಸಿಕೊಳ್ಳುತ್ತಿದ್ದಾರೆಂದು ಅವರು ಹೇಳಿದರು.
ಕೇಕ್ ಕತ್ತರಿಸುವ ಬದಲು ಹುಟ್ಟಿದಹಬ್ಬದ ದಿನ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ ಆಚರಿಸಬಹುದು. ಬಿಹಾರದ ಔರಂಗಾಬಾದ್‌ನಲ್ಲಿಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಅವರು ಮಾತಾಡುತ್ತಿದ್ದರು.
ಗ್ರಾಮಗಳಲ್ಲಿ ಕೂಡಾ ಇಂದು ಭಾರತ ಸಂಸ್ಕೃತಿ ಹಿನ್ನಡೆ ಕಂಡು ಬರುತ್ತಿದೆ ಎಂದು ಸಚಿವರು ಹೇಳಿದರು.ಮಕ್ಕಳು ಅಮ್ಮಂದಿರನ್ನು ಮಮ್ಮಿ ಎಂದು, ತಂದೆಯಂದಿರನ್ನು ಪಪ್ಪಾ ಎಂದು ಕರೆಯುತ್ತಿದ್ದಾರೆ. ಇಂತಹ ಕರೆಗಳು ಸಂಬಂಧಗಳ ನಿಕಟತೆಯನ್ನು ದುರ್ಬಲಗೊಳಿಸುತ್ತವೆ.
ಹಿಂದೂ ಧರ್ಮವನ್ನು ಸಂರಕ್ಷಿಸಲಿಕ್ಕಾಗಿ ಎಲ್ಲ ಹಿಂದೂಗಳು ಒಂದಾಗಬೇಕಾದ ಸಮಯ ಇದು. ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ 21 ಕೋಟಿಯನ್ನು ದಾಟಿದೆ. ಈ ಪರಿಸ್ಥಿತಿಯಲ್ಲಿ ಇಸ್ಲಾಮ್ ಧರ್ಮವನ್ನು ಅಲ್ಪಸಂಖ್ಯಾತ ಧರ್ಮವನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ. ಈ ವಿಷಯದಲ್ಲಿ ದೇಶಾದ್ಯಂತ ಸಂವಾದಗಳು ನಡೆಯಬೇಕಿದೆ ಎಂದು ಸಚಿವರು ಹೇಳಿದರೆಂದು ವರದಿಯಾಗಿದೆ.







