ಬರ: ಕೇರಳದಲ್ಲಿ ಕೃತಕ ಮಳೆಯ ಸಾಧ್ಯತೆ
.jpg)
ತಿರುವನಂತಪುರಂ,ಮಾ.7: ರಾಜ್ಯದಲ್ಲಿ ಕಠಿಣ ಬರ ಬೆದರಿಕೆ ಎದುರಾಗಿದೆ. ಇದನ್ನು ಎದುರಿಸಲು ಅಗತ್ಯವೆಂದಾದರೆ ಕೃತಕ ಮಳೆಸುರಿಸುವ ಕುರಿತು ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳ ವಿಧಾನಸಭೆಯಲ್ಲಿ ಹೇಳಿದ್ದಾರೆ.
ಮೋಡ ಬಿತ್ತನೆಮೂಲಕ ಕೃತಕ ಮಳೆ ಸುರಿಯುವ ಕುರಿತು ಸರಕಾರ ಚಿಂತನೆ ನಡೆಸುತ್ತಿದೆ. ಬರ ಎದುರಿಸುವ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಸರಕಾರ ಮಾಡಿಕೊಂಡಿದೆ. ಬರ ರಾಜ್ಯಸರಕಾರದ ಕೊಡುಗೆಯಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ಸದನ ಚಟುವಟಿಕೆ ಸ್ಥಗಿತಗೊಳಿಸಿ ಬರಸಮಸ್ಯೆ ಚರ್ಚಿಸಬೇಕೆಂದುಶಾಸಕ ಶಾಫಿ ಪರಂಬಿಲ್ ತುರ್ತು ಮಂಡಿಸಿದ ತುರ್ತು ಪ್ರಸ್ತಾವದಲ್ಲಿ ಮುಖ್ಯಮಂತ್ರಿ ವಿಧಾನಸಭೆಯಲ್ಲಿ ಉತ್ತರಿಸುತ್ತಿದ್ದರು. ಬರ ಎದುರಿಸುವುದಕ್ಕೆ ಸೂಕ್ತ ಕ್ರಮಗಳನ್ನು ಕಳೆದ ಅಕ್ಟೋಬರ್‌ನಿಂದ ಆರಂಭಿಸಲಾಗಿದೆ ಎಂದು ರೆವನ್ಯೂ ಸಚಿವ ಇ. ಚಂದ್ರಚೂಡನ್ ಸದನಕ್ಕೆ ತಿಳಿಸಿದ್ದಾರೆ.
ಜನರನ್ನು ಬಾಧಿಸುವ ಸಮಸ್ಯೆಗಳನ್ನುಮೊದಲು ಚರ್ಚಿಸಬೇಕಾಗಿದೆ ಎಂದು ಶಾಫಿ ಪರಂಬಿಲ್ ಆಗ್ರಹಿಸಿದರು. ಸಮಾಲೋಚನೆಯಿಂದ ಅಥವಾ ಸೇರಿದ ಜನರ ಸಂಖ್ಯೆಯಿಂದ ಜನರಿಗೆ ನೀರು ಸರಬರಾಜು ಮಾಡಲು ಸಾಧ್ಯವಿಲ್ಲ ಎಂದು ಸದನದಲ್ಲಿ ಶಾಫಿ ಪರಂಬಿಲ್ ಅಭಿಪ್ರಾಯ ವ್ಯಕ್ತಪಡಿಸಿದರೆಂದು ವರದಿ ತಿಳಿಸಿದೆ.