ರಾಜ್ಯ ಮಟ್ಟದ ನಾಟಕ ಸ್ಪರ್ಧೆ: ಸಂತ ಅಲೋಶಿಯಸ್ ಕಾಲೇಜಿನ ತಂಡ ದ್ವಿತೀಯ

ಮಂಗಳೂರು, ಮಾ.7: ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ, ಮಾರ್ಚ್ 3 ಮತ್ತು 4 ರಂದು ನಡೆದ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ, ಸಂತ ಅಲೋಶಿಯಸ್ ಕಾಲೇಜಿನ ನಾಟಕ ತಂಡವು ಭವ್ಯ ಶೆಟ್ಟಿ ಮಾರ್ಗದರ್ಶನದಡಿ ಪ್ರದರ್ಶಿಸಿದ ಅಗ್ನಿವರ್ಣ ನಾಟಕ ದ್ವಿತೀಯ ಸ್ಥಾನವನ್ನು ಪಡೆದಿದೆ.
ವಿವಿಧ ವಲಯಗಳಿಂದ ರಾಜ್ಯಕ್ಕೆಆಯ್ಕೆಯಾದ ಅತ್ಯುತ್ತಮ 8ನಾಟಕಗಳಲ್ಲಿ, ಅಗ್ನಿವರ್ಣ ನಾಟಕವು ದ್ವಿತೀಯ ಸ್ಥಾನಗಳಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು,ರಂಗಾಯಣದ ಜಂಟಿ ಆಶ್ರಯದಲ್ಲಿ, ಈ ವರ್ಷ ಕಾಲೇಜು ರಂಗೋತ್ಸವ ಎಂಬ ಶೀರ್ಷಿಕೆಯಡಿ, ಕರ್ನಾಟಕದಾದ್ಯಂತ ಸುಮಾರು 240 ಕಾಲೇಜುಗಳಿಗೆ ಹೊಸ ನಾಟಕವನ್ನುಕಟ್ಟಲು ಅಣಿಗೊಳಿಸಿ, ಜಿಲ್ಲೆ-ವಲಯ-ರಾಜ್ಯ ಹೀಗೆ ಮೂರು ಮಟ್ಟಗಳಲ್ಲಿ ಸ್ಪರ್ಧೆಯನ್ನು ಹಮ್ಮಿಕೊಂಡಿತು.
ಅಗ್ನಿವರ್ಣ ನಾಟಕವನ್ನುಕೈಗೆತ್ತಿಗೊಂಡು ಒಂದು ತಿಂಗಳ ರಂಗ ತರಬೇತಿ ಹಾಗೂ ಪೂರ್ವಾಭ್ಯಾಸದೊಂದಿಗೆ ಜ.6ರಂದು ಡಾನ್ ಬಾಸ್ಕೋ ಹಾಲ್, ಮಂಗಳೂರು ಇಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ, ಒಟ್ಟು 8 ನಾಟಕಗಳ ನಡುವೆ, ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿ, ವಲಯ ಮಟ್ಟಕ್ಕೆಆಯ್ಕೆಯಾಗಿತ್ತು.
ಜನವರಿ 9, 2017 ರಂದು, ಮೈಸೂರಿನ ಕಲಾಮಂದಿರದಲ್ಲಿ ನಡೆದ ವಲಯಮಟ್ಟದ ಸ್ಪರ್ಧೆಯಲ್ಲಿ, ಜಿಲ್ಲಾಮಟ್ಟದಲ್ಲಿ ಜಯಗಳಿಸಿದ, 8 ಜಿಲ್ಲೆಗಳ 16 ನಾಟಕಗಳಲ್ಲಿ, ಅಗ್ನಿವರ್ಣ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ನಂತರ, ಕಾಲೇಜಿನಲ್ಲಿಯೂ ಎರಡು ಪ್ರದರ್ಶನಗಳನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ನಿರ್ದೇಶಕಿ ಭವ್ಯ ಶೆಟ್ಟಿ ತಿಳಿಸಿದ್ದಾರೆ. ನಾಟಕವನ್ನು ಎಚ್.ಎಸ್. ವೆಂಕಟೇಶ ಮೂರ್ತಿ ರಚಿಸಿದ್ದಾರೆ.







