Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಗ್ರಾಹಕರನ್ನು ಬೇಕಾಬಿಟ್ಟಿ ಸುಲಿಯುವ...

ಗ್ರಾಹಕರನ್ನು ಬೇಕಾಬಿಟ್ಟಿ ಸುಲಿಯುವ ಬ್ಯಾಂಕುಗಳನ್ನು ಕೇಳುವವರಿಲ್ಲವೇ ?

ಧೀರೇಂದ್ರ ಕುಮಾರ್ಧೀರೇಂದ್ರ ಕುಮಾರ್7 March 2017 3:56 PM IST
share
ಗ್ರಾಹಕರನ್ನು ಬೇಕಾಬಿಟ್ಟಿ ಸುಲಿಯುವ ಬ್ಯಾಂಕುಗಳನ್ನು ಕೇಳುವವರಿಲ್ಲವೇ ?

ಬ್ಯಾಂಕುಗಳಲ್ಲಿ ನಗದು ವಹಿವಾಟುಗಳಿಗೆ ಶುಲ್ಕ ವಿಧಿಸಲಾಗುತ್ತದೆ ಎನ್ನುವುದು ದಿಢೀರ್ ಸುದ್ದಿ ಮಾಡಿದೆ. ಪ್ರತಿ ತಿಂಗಳು ನಾಲ್ಕು ವಹಿವಾಟುಗಳ ಬಳಿಕ ಪ್ರತಿ ನಗದು ಠೇವಣಿ ಆಥವಾ ನಗದು ಹಿಂದೆಗೆತದ ಮೇಲೆ 150 ರೂ.ಶುಲ್ಕ ಮತ್ತು ತೆರಿಗೆಯನ್ನು ವಿಧಿಸುವುದಾಗಿ ಎಚ್‌ಡಿಎಫ್‌ಸಿ ಬ್ಯಾಂಕು ಪ್ರಕಟಿಸುವುದರೊಂದಿಗೆ ಗ್ರಾಹಕರಿಗೆ ಮೊದಲ ಆಘಾತ ನೀಡಿತ್ತು.

 ಗ್ರಾಹಕನ ಅರಿವಿಗೇ ಬಾರದೆ ಶುಲ್ಕಗಳನ್ನು ವಿಧಿಸುವುದು ಬ್ಯಾಂಕುಗಳ ಸಾಮಾನ್ಯ ಕಾರ್ಯತಂತ್ರವಾಗಿದೆ. ಐಸಿಐಸಿಐ ಮತ್ತು ಎಕ್ಸಿಸ್ ಬ್ಯಾಂಕುಗಳು ಇತ್ತಿಚಿನ ಕೆಲವು ಸಮಯದಿಂದ ನಗದು ವಹಿವಾಟು ಶುಲ್ಕವನ್ನು ವಿಧಿಸುತ್ತಿವೆ. ಹೀಗಿರುವಾಗ ಎಚ್‌ಡಿಎಫ್‌ಸಿ ಬ್ಯಾಂಕು ಮಾಮೂಲು ಮಾರ್ಗವನ್ನು ಬಿಟ್ಟು ಬಹಿರಂಗ ಪ್ರಕಟಣೆಯನ್ನು ನೀಡಿರುವುದು ತುಂಬ ಅಚ್ಚರಿ ಮೂಡಿಸಿದೆ. ನಗದುರಹಿತ ವ್ಯವಹಾರಕ್ಕೆ ಉತ್ತೇಜನ ನಿಡುವ ಸರಕಾರದ ಪ್ರಯತ್ನಗಳನ್ನು ಬೆಂಬಲಿಸುವ ಸೋಗಿನಲ್ಲಿ ಈ ಬ್ಯಾಂಕುಗಳು ಗ್ರಾಹಕರ ಜೇಬಿನ ಭಾರವನ್ನು ಕಡಿಮೆ ಮಾಡಲು ನಿರ್ಧರಿಸಿವೆ. ಸದ್ಯವೇ ಇತರ ಬ್ಯಾಂಕುಗಳೂ ಈ ಸುಲಿಗೆಯನ್ನು ಆರಂಭಿಸುವ ಸಂಕೇತಗಳಿವೆ.

ಈ ಶುಲ್ಕಗಳಲ್ಲಿ ಯಾವುದೇ ಏಕರೂಪತೆ ಇಲ್ಲ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ, ಅದು ಮೇಲ್ನೋಟದಲ್ಲಿಯೇ ಸ್ಪಷ್ಟವಾಗಿ ಕಾಣುತ್ತಿದೆ.ಎಚ್‌ಡಿಎಫ್‌ಸಿ ಬ್ಯಾಂಕು ಪ್ರತಿ ವಹಿವಾಟಿಗೆ 150 ರೂ.ಶುಲ್ಕ ವಿಧಿಸಿದರೆ ಇನ್ನೊಂದು ಬ್ಯಾಂಕು 50 ರೂ ವಿಧಿಸುತ್ತಿದೆ. ಮಗದೊಂದು ಬ್ಯಾಂಕು ಪ್ರತಿ 1,000 ರೂ.ಗೆ ಐದು ರೂ.ವಿಧಿಸುತ್ತದೆ.

ಈ ಬ್ಯಾಂಕುಗಳು ಈ ಶುಲ್ಕಗಳನ್ನು ನಿರ್ಧರಿಸಲು ಬಳಸಿರುವ ಮಾನದಂಡವಾದರೂ ಏನು? ಬ್ಯಾಂಕುಗಳ ಮೇಲೆ ನಿಯಂತ್ರಣ ಹೊಂದಿರುವ ಆರ್‌ಬಿಐಗಾದರೂ ಇದರ ಬಗ್ಗೆ ಗೊತ್ತಿದೆಯೇ? ಜನಸಾಮಾನ್ಯರಿಗೂ ಗೊತ್ತಿಲ್ಲ, ಆದರೂ ಉತ್ತರವನ್ನು ಊಹಿಸು ವುದು ಕಷ್ಟವೇನಲ್ಲ.

ಇತರ ಬ್ಯಾಂಕುಗಳು ಇನ್ನೂ ಹೆಚ್ಚು ಗೊಂದಲಕಾರಿ ಶುಲ್ಕಗಳನ್ನು ವಿಧಿಸುತ್ತಿವೆ. ಉದಾಹರಣೆಗೆ ಎಕ್ಸಿಸ್ ಬ್ಯಾಂಕ್ ಗ್ರಾಹಕನು ತಾನು ಖಾತೆಯನ್ನು ಹೊಂದಿರುವ ಶಾಖೆಯನ್ನು ಬಿಟ್ಟು ಬೇರೆ ಶಾಖೆಗಳಲ್ಲಿ ವಹಿವಾಟು ನಡೆಸಿದರೆ ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತದೆ. ಎಲ್ಲ ಬ್ಯಾಂಕುಗಳು ಸಂಪೂರ್ಣ ನೆಟ್‌ವರ್ಕ್‌ನಿಂದ ಸಂಪರ್ಕಿತ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೊಂದಿರುವಾಗ ‘ತವರು ಶಾಖೆ ’ಯನ್ನು ಬಿಟ್ಟು ಬೇರೆ ಶಾಖೆಯ ಮೂಲಕ ಗ್ರಾಹಕ ವ್ಯವಹಾರ ನಡೆಸಿದರೆ ಅದು ನಿಜಕ್ಕೂ ಎಕ್ಸಿಸ್ ಬ್ಯಾಂಕಿಗೆ ಹೆಚ್ಚಿನ ಖರ್ಚಿಗೆ ಕಾರಣವಾಗುತ್ತದೆಯೇ? ಹೆಚ್ಚಿನ ಮಟ್ಟಿಗೆ ಇಲ್ಲ ಎನ್ನುವುದೇ ಉತ್ತರವಾಗುತ್ತದೆ. ಈ ಬ್ಯಾಂಕುಗಳು ಗ್ರಾಹಕರಿಂದ ಹೆಚ್ಚುವರಿ ಶುಲ್ಕಗಳನ್ನು ವಸೂಲು ಮಾಡಲು ಏನಾದರೊಂದು ಕಾರಣಗಳನ್ನು ಹುಡುಕುತ್ತಲೇ ಇರುತ್ತವೆ. ಇಂತಹ ಪ್ರಶ್ನೆಗಳನ್ನು ಬ್ಯಾಂಕುಗಳಿಗೆ ಕೇಳಬೇಕಾದ ಆರ್‌ಬಿಐ ಅದೇನು ಮಾಡುತ್ತಿದೆಯೋ ಗೊತ್ತಿಲ್ಲ !

ವಹಿವಾಟು ಶುಲ್ಕ ಬಿಡಿ,ಬ್ಯಾಂಕುಗಳು ಗ್ರಾಹಕರನ್ನು ದೋಚಲು ಅದಕ್ಕಿಂತಲೂ ಮುಂದೆ ಸಾಗುತ್ತಿವೆ. ಎರಡು ವಾರಗಳ ಹಿಂದೆ ಗ್ರಾಹಕನೋರ್ವ ತನ್ನ ಬ್ಯಾಂಕಿನ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ದೂರಿಕೊಂಡಿದ್ದ. ಬ್ಯಾಂಕು ಆತನನ್ನು ತನ್ನ ‘ಆದ್ಯತೆಯ ಬ್ಯಾಂಕಿಂಗ್ ಪ್ರೋಗ್ರಾಮ್ ’ನಲ್ಲಿ ಸೇರ್ಪಡೆ ಮಾಡಿಕೊಂಡಿತ್ತು. ಇದಕ್ಕಾಗಿ ಆತ ಹೆಚ್ಚುವರಿ ಶುಲ್ಕವನ್ನು ಕಕ್ಕಬೇಕಾಗುತ್ತದೆ. ಬ್ಯಾಂಕು ಇ-ಮೇಲ್‌ವೊಂದನ್ನು ಗ್ರಾಹಕನಿಗೆ ರವಾನಿಸಿತ್ತು ಮತ್ತು ಸೇರ್ಪಡೆಯನ್ನು ನಿರಾಕರಿಸಲು ಇದ್ದ ‘ಆಪ್ಟ್ ಔಟ್ ’ಲಿಂಕ್‌ನ್ನು ಪೇಜಿನ ಕೆಳಭಾಗದ ಮೂಲೆಯೊಂದರಲ್ಲಿರಿಸಿತ್ತು. ಆಪ್ಟ್ ಔಟ್ ಲಿಂಕ್‌ನ್ನು ಗ್ರಾಹಕ ಕ್ಲಿಕ್ಕಿಸದಿದ್ರೆ ಆತ ಯೋಜನೆಗೆ ಸೇರ್ಪಡೆಗೊಂಡ ಎಂದು ಪರಿಗಣಿಸಲಾಗುತ್ತದೆ. ಗ್ರಾಹಕನನ್ನು ಕತ್ತಲಲ್ಲಿಡುವ ಇಂತಹ ಪರಿಪಾಠ ನಿಜಕ್ಕೂ ನೈತಿಕತೆಯನು ಹೊಂದಿಲ್ಲ. ಗ್ರಾಹಕ ಪ್ರತಿಭಟಿಸಿದಾಗ ತನ್ನ ನಿಲುವನ್ನು ಸಮರ್ಥಿಸಿಕೊಂಡ ಬ್ಯಾಂಕು ಇದು ನಿಯಮಾವಳಿಗಳಿಗೆ ಅನುಗುಣವಾಗಿದೆ ಎಂದು ಹೇಳಿ ತಿಪ್ಪೆ ಸಾರಿಸಿದೆ.

ಇರಬಹುದು,ಬ್ಯಾಂಕುಗಳು ಕಾನೂನು ತೊಡಕು ಬರಬಾರದೆಂದು ವಕೀಲರ ದಂಡನ್ನೇ ನೇಮಿಸಿಕೊಂಡಿರುತ್ತವೆ ಮತು ಎಲ್ಲವನ್ನೂ ನಿಯಮಗಳಿಗೆ ಅನುಗುಣ ವಾಗಿಯೇ ಮಾಡುತ್ತವೆ ಎಂದುಕೊಳ್ಳೋಣ. ಆದರೆ ಗ್ರಾಹಕರಿಗೆ ಅನ್ಯಾಯವಾಗುತ್ತಿರುವಾಗಲೂ ಆರ್‌ಬಿಐ ಸುಮ್ಮನಿರುತ್ತದೆಯಲ್ಲ...ಅದೇ ಅಚ್ಚರಿ ಮೂಡಿಸುತ್ತಿದೆ. ಗ್ರಾಹಕರ ರಕ್ಷಣೆಯಲ್ಲಿ ಅದು ವಿಫಲವಾಗಿದೆ ಎನ್ನುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ.

 ಬ್ಯಾಂಕುಗಳು ಬೇಕಾಬಿಟ್ಟಿಯಾಗಿ ಶುಲ್ಕಗಳನ್ನು ವಿಧಿಸುವ ಪಿಡುಗು ಅವು ಏಕಪಕ್ಷೀಯವಾಗಿ ಗ್ರಾಹಕನ ಹಣಕ್ಕೆ ನೇರವಾಗಿ ಕೈ ಹಾಕಲು ಅವಕಾಶವಿರುವವರೆಗೂ ಮುಂದುವರಿಯುತ್ತಲೇ ಇರುತ್ತದೆ. ಯೋಚಿಸಿ,ಇತರ ಯಾವುದೇ ವ್ಯವಹಾರಗಳಲ್ಲಿ ಗ್ರಾಹಕ ತಾನು ಕೊಡಬೇಕಾದ ಹಣವನ್ನು ತಾನೇ ತೆಗೆದುಕೊಡುತ್ತಾನೆಯೇ ಹೊರತು ಹಣ ಪಡೆಯಬೇಕಾದ ವ್ಯಕ್ತಿ ಆತನ ಜೇಬಿಗೆ ಕೈಹಾಕುವುದಿಲ್ಲ, ಹಾಗೆ ಮಾಡಿದರೆ ಅದು ಅಪರಾಧವಾಗುತ್ತದೆ. ಆದರೆ ಬ್ಯಾಂಕುಗಳು ಈ ಅಪರಾಧವನ್ನು ಮಾಡಬಹುದು! ಗ್ರಾಹಕರಿಗೆೆ ಯಾವುದೇ ಶುಲ್ಕ ವಿಧಿಬೇಕಾದರೆ ಬ್ಯಾಂಕುಗಳು ಯಾವಾಗ ಬೇಕಾದರೂ ಅವರ ಖಾತೆಗೆ ಕೈ ಹಾಕಬಹುದು. ಇದು ಹೀಗೇಕೆ? ಬಾಂಕುಗಳಲಿ ವಿಶ್ವಾಸವಿಟ್ಟು ಗ್ರಾಹಕರು ಹಣವನ್ನು ಅವುಗಳ ವಶಕ್ಕೆ ಒಪ್ಪಿಸಿದ್ದಾರೆ ಎಂಬ ಕಾರಣಕ್ಕಾಗಿಯೇ?

 ಇಲ್ಲೊಂದು ಸಲಹೆ. ಬ್ಯಾಂಕುಗಳು ಗ್ರಾಹಕರಿಗೆ ಯಾವುದೇ ಶುಲ್ಕ ವಿಧಿಸಬೇಕಿದ್ದರೆ ಅವು ಬಿಲ್ ಕಳುಹಿಸುವಂತೆ ಮತ್ತು ಗ್ರಾಹಕರು ಬಿಲ್‌ಗೆ ಅನುಗುಣವಾಗಿ ಮೊತ್ತವನ್ನು ಪಾವತಿಸಲು ಸಾಧ್ಯವಾಗುವಂತೆ ಬ್ಯಾಂಕಿಂಗ್ ಕಾನೂನುಗಳಲ್ಲಿ ಮೂಲಭೂತ ಬದಲಾವಣೆಯಾಗಬೆಕು. ಬ್ಯಾಂಕುಗಳು ಗ್ರಾಹಕರಿಗೆ ಮಾಹಿತಿ ನೀಡದೇ ಅವರ ಖಾತೆಗೆ ಕೈಹಾಕಬಾರದು. ಇದೊಂದು ದೊಡ್ಡ ಬದಲಾವಣೆ ಎನ್ನಿಸಬಹುದು. ಆದರೆ ದುರದೃಷ್ಟಕರವೆಂದರೆ ಭಾರತೀಯ ಬ್ಯಾಂಕುಗಳು ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಳ್ಳಲು ವಿಫಲವಾಗಿವೆ. ಹೀಗಾಗಿಯೇ ಇಂತಹ ಕ್ರಮಗಳ ಅಗತ್ಯವಿದೆ.

ಕೃಪೆ : economictimes.indiatimes.com

share
ಧೀರೇಂದ್ರ ಕುಮಾರ್
ಧೀರೇಂದ್ರ ಕುಮಾರ್
Next Story
X