ಭಾರತದಲ್ಲಿ ಪೊಲೀಸರು ಗರಿಷ್ಠ ಭ್ರಷ್ಟರು; ಧಾರ್ಮಿಕ ನಾಯಕರೂ ಕಳಂಕಿತರು: ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್ ಸಮೀಕ್ಷೆ

ಮುಂಬೈ,ಮಾ.7: ಏಶ್ಯ ಪೆಸಿಫಿಕ್ ಪ್ರಾಂತದಲ್ಲೇ ಅತ್ಯಧಿಕ ಲಂಚಗುಳಿತನವಿರುವ ರಾಷ್ಟ್ರವೆಂಬ ಹಣೆಪಟ್ಟಿ ಕಟ್ಟಿಕೊಂಡ ಭಾರತದಲ್ಲಿ ಧಾರ್ಮಿಕ ನಾಯಕರು ಕೂಡಾ ಭ್ರಷ್ಟಾಚಾರದ ಕಳಂಕದಿಂದ ಮುಕ್ತರಾಗಿಲ್ಲ. ಕೆಲವು ಅಥವಾ ಎಲ್ಲಾ ಧಾರ್ಮಿಕ ನಾಯಕರೂ ಒಂದಲ್ಲ ಒಂದು ರೀತಿಯಲ್ಲಿ ಭ್ರಷ್ಟರಾಗಿದ್ದಾರೆಂದು ಶೇ.71 ಮಂದಿ ಅಭಿಪ್ರಾಯಪಟ್ಟಿದ್ದಾರೆಂದು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್‌ನ ಸಮೀಕ್ಷೆಯೊಂದು ತಿಳಿಸಿದೆ.
ಆದಾಗ್ಯೂ ಶೇ.85 ಮಂದಿಯ ಅಭಿಪ್ರಾಯದ ಪ್ರಕಾರ ಭ್ರಷ್ಟಾಚಾರದಲ್ಲಿ ಪೊಲೀಸ್ ಇಲಾಖೆಯು ಅಗ್ರಸ್ಥಾನದಲ್ಲಿದೆಯೆಂದು ಸಮೀಕ್ಷೆ ಬಹಿರಂಗಪಡಿಸಿದೆ,. ಕೇವಲ 14 ಮಂದಿ ಭಾರತೀಯರು ಮಾತ್ರ ಧಾರ್ಮಿಕರ ನಾಯಕರು ಭ್ರಷ್ಟಾಚಾರದಲ್ಲಿ ಶಾಮೀಲಾಗಿಲ್ಲವೆಂದು ಹೇಳಿದ್ದರೆ, ಇತರ ಶೇ. 15 ಮಂದಿಗೆ ಧಾರ್ಮಿಕ ನಾಯಕರ ಭ್ರಷ್ಟಾಚಾರದ ಟುವಟಿಕೆಗಳ ಬಗ್ಗೆ ತಮಗೆ ಅರಿವಿಲ್ಲವಂದು ಹೇಳಿದ್ದಾರೆ.
ಆದಾಗ್ಯೂ ಏಶ್ಯ ಪೆಸಿಫಿಕ್ ಪ್ರಾಂತದ ರಾಷ್ಟ್ರಗಳನ್ನು ಸಮಗ್ರವಾಗಿ ತೆಗೆದುಕೊಂಡಾಗ ಭ್ರಷ್ಟಾಚಾರದ ವಿಷಯದಲ್ಲಿ ಧಾರ್ಮಿಕರ ನಾಯಕರ ಸ್ಥಿತಿಗತಿ ಪರವಾಗಿಲ್ಲವೆಂದೇ ಹೇಳಬಹುದು. ಈ ಪ್ರಾಂತದಾದ.್ಯಂತ ಸಮೀಕ್ಷೆಯಲ್ಲಿ ಪಾಲ್ಗೊಂಡ ಪ್ರತಿ ಐದು ಮಂದಿಯಲ್ಲಿ ಒಬ್ಬರು ಮಾತ್ರ ಧಾರ್ಮಿಕ ಮುಖಂಡರು ಭ್ರಷ್ಟಾಚಾರಿಗಳೆಂದು ಹೇಳಿದ್ದರು.
ಇವರಿಗೆ ಹೋಲಿಸಿದರೆ ನ್ಯಾಯಾಧೀಶರು ಹಾಗೂ ಮ್ಯಾಜಿಸ್ಟ್ರೇಟರ ಸ್ಥಿತಿ ಉತ್ತಮವಾಗಿದ್ದು, ಶೇ.65 ಮಂದಿ ಮಾತ್ರವೇ ಅವರನ್ನು ಅತ್ಯಂತ ಭ್ರಷ್ಟಾಚಾರಿಗಳೆಂದು ಹೇಳಿದ್ದಾರೆಎ.
ಪೊಲೀಸ್ ಬಳಿಕ ಸರಕಾರಿ ಇಲಾಖೆಗಳು (ಶೇ.84), ಉದ್ಯಮ ಕಾರ್ಯನಿರ್ವಾಹಕರು (ಷೇ.79), ಸ್ಥಳೀಯ ಪೌರಾಡಳಿತ ಪ್ರತಿನಿಧಿಗಳು (ಶೇ.78) ಹಾಗೂ ಸಂಸದರು (ಶೇ.76) ಅತ್ಯಧಿಕ ಭ್ರಷ್ಟಾಚಾರದಿಂದ ಪೀಡಿತವಾದ ಸಾರ್ವಜನಿಕ ಸೇವೆಗಳ ಪಟ್ಟಿಯಲ್ಲಿ ಮೊದಲ ಐದು ಸ್ಥಾನವನ್ನು ಆಲಂಕರಿಸಿವೆ.







