ಬ್ಯಾರಿಕೇಡ್‌ಗೆ ಬೈಕ್ ಢಿಕ್ಕಿ: ಸಹಸವಾರ ಮೃತ್ಯು

ಬೈಂದೂರು, ಮಾ.7: ನಾವುಂದ ಜ್ಯೂನಿಯರ್ ಕಾಲೇಜು ಸಮೀಪ ಸಮ್ಮಿಲನ ಶ್ಯಾಮಿಯಾನದ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಾ.6 ರಂದು ಸಂಜೆ 7.15ರ ಸುಮಾರಿಗೆ ಬೈಕೊಂದು ಬ್ಯಾರಿಕೇಡ್ ಗೆ ಢಿಕ್ಕಿ ಹೊಡೆದ ಪರಿಣಾಮ ಸಹಸವಾರರೊಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಬೈಕ್‌ನ ಹಿಂಬದಿ ಸವಾರ ಮೋಹನ ಖಾರ್ವಿ ಎಂದು ಗುರುತಿಸಲಾಗಿದೆ. ಸವಾರ ನವೀನ್ ಖಾರ್ವಿ ತೀವ್ರವಾಗಿ ಗಾಯಗೊಂಡು ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೈಂದೂರು ಕಡೆಯಿಂದ ಕುಂದಾಪುರ ಕಡೆ ಹೋಗುತ್ತಿದ್ದ ಬೈಕ್ ಹೆದ್ದಾರಿ ಕಾಮಗಾರಿ ಬಗ್ಗೆ ರಸ್ತೆಗೆ ಅಡ್ಡವಾಗಿಟ್ಟಿದ್ದ ಬ್ಯಾರಿಕೇಟ್ ಗಮನಿಸದೆ ಢಿಕ್ಕಿ ಹೊಡೆ ಯಿತು. ಇದರಿಂದ ಸವಾರರಿಬ್ಬರು ರಸ್ತೆಗೆ ಬಿದ್ದು ಗಾಯಗೊಂಡರು.
ಇವರಲ್ಲಿ ಗಂಭೀರವಾಗಿ ಗಾಯಗೊಂಡ ಮೋಹನ್ ಖಾರ್ವಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





