ಜಪಾನ್‌ಗೆ ಅಮೆರಿಕದ 100 ಶೇ. ಬೆಂಬಲ: ಶಿಂರೊ ಅಬೆ

ಟೀಕಿಯೊ, ಮಾ. 7: ಅಮೆರಿಕವು ಜಪಾನ್‌ನೊಂದಿಗೆ 100 ಶೇಕಡ ಇರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭರವಸೆ ನೀಡಿದ್ದಾರೆ ಎಂದು ಜಪಾನ್ ಪ್ರಧಾನಿ ಶಿಂರೊ ಅಬೆ ಮಂಗಳವಾರ ಹೇಳಿದ್ದಾರೆ.
ಉತ್ತರ ಕೊರಿಯ ಸೋಮವಾರ ನಡೆಸಿದ ಕ್ಷಿಪಣಿ ಪರೀಕ್ಷೆಗಳ ಹಿನ್ನೆಲೆಯಲ್ಲಿ, ಜಪಾನ್ ಪ್ರಧಾನಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೋನ್‌ನಲ್ಲಿ ಮಾತುಕತೆ ನಡೆಸಿದ ವೇಳೆ ಟ್ರಂಪ್ ಈ ಭರವಸೆ ನೀಡಿದ್ದಾರೆ.
‘‘ಅಮೆರಿಕವು ಜಪಾನ್‌ಗೆ 100 ಶೇಕಡ ಬೆಂಬಲ ನೀಡುವುದಾಗಿ ಅಧ್ಯಕ್ಷ ಟ್ರಂಪ್ ನನ್ನೊಂದಿಗೆ ಹೇಳಿದರು ಹಾಗೂ ಈ ಸಂದೇಶವನ್ನು ಜಪಾನ್ ಜನರಿತೆ ತಲುಪಿಸುವಂತೆ ಅವರು ನನ್ನನ್ನು ಕೋರಿದರು’’ ಎಂದು ತನ್ನ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಬೆ ತಿಳಿಸಿದರು.
Next Story





