ಮುಲ್ಕಿ: ಮಹಿಳೆಯ ಸರ ಎಗರಿಸಲು ಯತ್ನಿಸಿದ ಬೈಕ್ ಸರಗಳ್ಳರು

ಮುಲ್ಕಿ, ಮಾ.7: ಪುನರೂರು ಸಮೀಪದ ಕೆರೆಕಾಡಿನಿಂದ ಗೋಳಿಜೋರಾಗೆ ಹೋಗುವ ರಸ್ತೆಯಲ್ಲಿ ಬೈಕಿನಲ್ಲಿ ಬಂದ ಇಬ್ಬರು ಮಹಿಳೆಯೊಬ್ಬರ ಸರ ಎಗರಿಸಲು ವಿಫಲ ಯತ್ನ ನಡೆದ ಘಟನೆ ಮಂಗಳವಾರ ಮದ್ಯಾಹ್ನ ನಡೆದಿದೆ.
ಮಂಗಳವಾರ ಮಧ್ಯಾಹ್ನ ಸುಮಾರು ಮೂರು ಗಂಟೆಗೆ ಗೋಳಿಜೋರಾ ನಿವಾಸಿಗಳಾದ ಸುಮಾರು ಆರು ಮಂದಿ ಕೆರೆಕಾಡು ಬಸ್ಸು ನಿಲ್ದಾಣದಲ್ಲಿ ಬಸ್ಸಿನಿಂದ ಇಳಿದು ಗೋಳಿಜೋರಾದ ತಮ್ಮ ಮನೆಗೆ ಹೋಗುವ ರಸ್ತೆಯಲ್ಲಿ ನಡೆಯುತ್ತಿದ್ದಾಗ ಹಿಂದಿನಿಂದ ಪಲ್ಸರ್ ಬೈಕಿನಲ್ಲಿ ಬಂದ ಇಬ್ಬರು ಆಗಂತುಕರು ಬಬಿತಾ ಎಂಬವರ ಕುತ್ತಿಗೆಗೆ ಕೈಹಾಕಿ ಸರವನ್ನು ಎಳೆದಿದ್ದಾರೆ.
ಆಗ ಮಹಿಳೆ ದಿಟ್ಟತನದಿಂದ ಅವರನ್ನು ಎದುರಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಆಗ ಸರ ತುಂಡಾಗಿ ಕೆಳಗೆ ಬಿದ್ದಿದೆ. ಏನಾಯಿತು ಎಂದಿ ತಿಳಿಯುಷ್ಟರಲ್ಲಿ ಬೈಕು ಸವಾರರು ಸ್ಥಳದಿಂದ ಪರಾರಿಯಾಗಿದ್ದಾರೆ.
ಬೈಕು ಸವಾರ ಹೆಲ್ಮೆಟ್ ಧರಿಸಿದ್ದು ಹಿಂಬದಿ ಕುಳಿತವ ಟೊಪ್ಪಿಧರಿಸಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.
Next Story





