ಸೇನೆಗೆ ಸೇರಿದ ಹತ ಯೋಧನ ಪತ್ನಿ

ಚಂಡೀಗಢ, ಮಾ.8: ಒಂದು ವರ್ಷದ ಹಿಂದೆ ಯುದ್ಧದಲ್ಲಿ ಮಡಿದಿದ್ದ ಯೋಧನ ಪತ್ನಿ ಸೇನೆಯನ್ನು ಸೇರಿದ ಅಪರೂಪದ ಘಟನೆ ನಡೆದಿದೆ. ತಮ್ಮ ವೀರ ಪರಂಪರೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಅಧಿಕಾರಿಗಳ ತರಬೇತಿ ಅಕಾಡಮಿಯಲ್ಲಿ ಬೆವರು ಹರಿಸಲು ಮುಂದಾಗಿದ್ದಾರೆ.
"ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನನ್ನ ಪತಿ ನನಗೆ ಆದರ್ಶ. ನನ್ನ ಪಾಲಿಗೆ ಅವರೇ ಹೀರೊ. ಸೇನೆಯಲ್ಲಿ ಸೇವೆ ಸಲ್ಲಿಸುವ ಮೂಲಕ ನನ್ನಲ್ಲಿ ಅವರು ಸದಾ ಇರುತ್ತಾರೆ" ಎಂದು ನೀತಾ ದೇಶ್ವಾಲ್ ಹೇಳಿದರು.
ಅವರ ಪತಿ ಮೇಜರ್ ಅಮಿತ್ ದೇಸ್ವಾಲ್ ಅವರು ಸೇನೆಯ ವಿಶೇಷ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ, ಕಳೆದ ವರ್ಷದ ಎಪ್ರಿಲ್ 14ರಂದು ಮಣಿಪುರದಲ್ಲಿ ಉಗ್ರರ ಜತೆ ಕಾಳಗದಲ್ಲಿ ಮೃತಪಟ್ಟಿದ್ದರು. ಈ ಘಟನೆಯಿಂದ ಕಂಗೆಟ್ಟಿದ್ದ ನೀತಾ ಅವರಿಗೆ ಮೂರು ವರ್ಷದ ಮಗನಷ್ಟೇ ಉಳಿದಿದ್ದ. ಆದರೆ ಶಾರ್ಟ್ ಸರ್ವಿಸ್ ಕಮಿಷನ್ ಅಧಿಕಾರಿಯಾಗಿ ಆಯ್ಕೆಯಾಗುವ ಮೂಲಕ ಅವರ ಛಲಕ್ಕೆ ಬಲ ಸಿಕ್ಕಿತ್ತು. 49 ವಾರಗಳ ಕಠಿಣ ತರಬೇತಿ ಎಪ್ರಿಲ್ ಒಂದರಿಂದ ಆರಂಭವಾಗಲಿದೆ.
Next Story