ಕಾಡಾನೆ ತುಳಿತಕ್ಕೆ ಆದಿವಾಸಿ ಮಹಿಳೆ ಬಲಿ

ಕೇಳಗಂ(ಕಣ್ಣೂರ್) ಮಾ.8: ಆರಳಂ ಫಾರ್ಮ್‌ನಲ್ಲಿ ಆದಿವಾಸಿ ಪುನರ್ವಸತಿ ಪ್ರದೇಶದಲ್ಲಿ ಆದಿವಾಸಿ ಮಹಿಳೆ ಕಾಡಾನೆ ತುಳಿತಕ್ಕೊಳಗಾಗಿ ಅಸುನೀಗಿದ್ದಾರೆ. ಹತ್ತನೆ ಬ್ಲಾಕ್ ಕೋಟ್ಟಪ್ಪಾರದ ನಾರಾಯಣನ್‌ರ ಪತ್ನಿ ಅಮ್ಮಿಣಿ(52) ಮೃತಪಟ್ಟಮಹಿಳೆಯಾಗಿದ್ದಾರೆ.
ಮಹಿಳೆಯ ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಈ ಪ್ರದೇಶದಲ್ಲಿ ಎರಡು ವರ್ಷಗಳ ಆನೆ ತುಳಿತಕ್ಕೊಳಗಾಗಿ ಮೃತಪಟ್ಟ ಮೂರನೆ ಘಟನೆ ಇದಾಗಿದೆ.
ಕಳೆದ ತಿಂಗಳು ಕೇಳಗಂ ಕೊಟ್ಟಿಯೂರ್‌ನಲ್ಲಿ ಓರ್ವ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರು ಎಂದು ವರದಿ ತಿಳಿಸಿದೆ.
Next Story