ನಾಯಕರೊಬ್ಬರ ಕಾಲಿಗೆ ಬೀಳುವುದು ಸಂಸ್ಕೃತಿಯಲ್ಲ, ವಿಕೃತಿ: ಈಶ್ವರಪ್ಪ

ಬೆಂಗಳೂರು, ಮಾ.8: ರಾಜಕೀಯ ನಾಯಕರೊಬ್ಬರ ಕಾಲಿಗೆ ಬೀಳುವುದು ಸಂಸ್ಕೃತಿಯಲ್ಲ, ಅದೊಂದು ವಿಕೃತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಬಿಜೆಪಿಯ ಕೆಲವು ಕಾರ್ಯಕರ್ತರು ಸಾಲಾಗಿ ನಿಂತು ಕಾಲಿಗೆರಗಿದ್ದ ಘಟನೆಯನ್ನು ಉಲ್ಲೇಖಿಸಿ ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತರು ಯಾವ ದೃಷ್ಟಿಯಿಂದ ಕಾಲಿಗೆ ಬಿದ್ದಿದ್ದಾರೋ ಗೊತ್ತಿಲ್ಲ. ಸ್ಥಾನಮಾನ ಪಡೆಯುವ ದೃಷ್ಟಿಯಿಂದ ಹೀಗೆ ಮಾಡಿದ್ದರೆ ಅದು ತಪ್ಪು, ಅವರು ಹಿರಿಯರೆಂಬ ನೆಲೆಯಲ್ಲಿ ಕಾಲಿಗೆರಗಿದ್ದರೆ ಅದು ಅವರ ವೈಯಕ್ತಿಕ ವಿಚಾರ. ಬಿಜೆಪಿಯಲ್ಲಿ ಈಗಲೂ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳಿವೆ ಎಂದು ಆನೇಕಲ್‌ನಲ್ಲಿ ಸುದ್ದಿಗಾರರಿಗೆ ಈಶ್ವರಪ್ಪ ತಿಳಿಸಿದರು.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೊ
Next Story





