ಕೇರಳದಲ್ಲಿಯೂ ಪೆಪ್ಸಿ, ಕೊಕೊಕೋಲಾ ಮಾರಾಟ ನಿಲ್ಲಿಸಲು ವಾಪಾರಿಗಳು ಸಜ್ಜು
ಕ್ಯಾಲಿಕಟ್,ಮಾ.7: ಕೇರಳದಲ್ಲಿ ಪೆಪ್ಸಿ, ಕೊಕೊಕೋಲಾ ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸಲು ವ್ಯಾಪಾರಿಗಳು ನಿರ್ಧರಿಸಿದ್ದಾರೆ. ತಂಪುಪಾನೀಯಗಳ ಕಂಪೆನಿಗಳು ನಡೆಸುವ ನೀರಿನ ಶೋಷಣೆಯನ್ನು ಪ್ರತಿಭಟಿಸಿ ಬಹುರಾಷ್ಟ್ರೀಯ ಕಂಪೆನಿಗಳ ಉತ್ಪನ್ನಗಳನ್ನು ಮಾರದಿರಲು ವ್ಯಾಪಾರಿಗಳು ನಿರ್ಧರಿಸಿದ್ದಾರೆ.
ಈವಿಷಯದಲ್ಲಿ ಮುಂದಿನ ಮಂಗಳವಾರ ಅಂತಿಮ ನಿರ್ಧಾರವನ್ನು ಘೋಷಿಸಲಾಗುವುದು. ತಂಪುಪಾನೀಯ ಕಂಪೆನಿಗಳು ದೊಡ್ಡ ಪ್ರಮಾಣದಲ್ಲಿ ನೀರನ್ನು ಭೂಮಿಯಿಂದ ಸೋಸುತ್ತವೆ.ಕೇರಳದಲ್ಲಿ ಇದು ಬರ ಪರಿಸ್ಥಿತಿಗೆ ಕಾರಣವಾಗುತ್ತಿದೆ ಎನ್ನಲಾಗಿದೆ.
ಇದು ಕೊಕೊಕೋಲಾ, ಪೆಪ್ಸಿ ಮಾರಾಟ ಸ್ಥಗಿತಕ್ಕೆ ಕಾರಣವೆಂದು ಈ ಹಿನ್ನೆಲೆಯಲ್ಲಿ ಕೇರಳ ವ್ಯಾಪಾರಿ ವಾಣಿಜ್ಯ ಸಮಿತಿಯ ಅಧ್ಯಕ್ಷ ಟಿ. ನಸ್ರುದ್ದೀನ್ ತಿಳಿಸಿದ್ದಾರೆ. ಮಾಲಿನ್ಯ ಸಂಸ್ಕರಣಕ್ಕೆ ಸರಿಯಾದ ಕ್ರಮಗಳನ್ನು ಕೂಡಾ ನಿರ್ವಹಿಸುವುದಿಲ್ಲ. ಕೊಕೊಕೋಲಾದ ಬದಲಿಗೆ ಊರಿನ ತಂಪುಪಾನೀಯಗಳನ್ನು, ಎಳೆನೀರನ್ನು ಮಾರಲಾಗುವುದು ಎಂದು ಅವರು ಹೇಳಿದರು.
ಕರ್ನಾಟಕ, ತಮಿಳ್ನಾಡಿನಲ್ಲಿ ವ್ಯಾಪಾರಿಗಳು, ಕೊಕೊಕೋಲಾ, ಪೆಪ್ಸಿ ಮಾರಾಟವನ್ನು ಸ್ಥಗಿತಗೊಳಿಸಿದ್ದಾರೆ. ಇಂತಹ ಉತ್ಪನ್ನಗಳನ್ನು ಬಹಿಷ್ಕರಿಸಲು ಆಗ್ರಹಿಸಿ ತಮಿಳ್ನಾಡಿನ ವ್ಯಾಪಾರಿಗಳು ನಮ್ಮನ್ನು ಭೇಟಿ ಮಾಡಿದ್ದಾರೆಂದು ಟಿ. ನಸ್ರುದ್ದೀನ್ ತಿಳಿಸಿದ್ದಾರೆ.ಕೇರಳದಲ್ಲಿ ಏಳುಲಕ್ಷ ವ್ಯಾಪಾರಿಗಳು ಕೊಕೊಕೋಲಾ,ಪೆಪ್ಸಿ ಮಾರಾಟ ನಿಲ್ಲಿಸಲು ಸಿದ್ಧರಾಗಿದ್ದಾರೆ.
ಗುರುವಾರ ವ್ಯಾಪಾರಿಗಳು ಮುಖ್ಯಮಂತ್ರಿಯನ್ನು ಭೇಟಿಯಾಗಲಿದ್ದಾರೆ. ಇದಕ್ಕೆ ಮೊದಲು ಎಂದಿನಿಂದಕೊಕಾಕೋಲಾ, ಪೆಪ್ಸಿ ಮಾರಾಟವನ್ನು ನಿಲ್ಲಿಸಲಾಗುವುದೆಂದು ಘೋಷಿಸಲಾಗುತ್ತದೆ ಎಂದು ನಸ್ರುದ್ದೀನ್ ತಿಳಿಸಿದರೆಂದು ವರದಿಯಾಗಿದೆ.