ಕಲಾಭವನ್ ಮಣಿ ಸಾವಿನ ಸಿಬಿಐ ತನಿಖೆ ನಡೆಸಬೇಕೆಂದು ಪತ್ನಿಯ ಆಗ್ರಹ

ಕೊಚ್ಚಿ,ಮಾ.8: ನಟ ಕಲಾಭವನ್ ಮಣಿಯ ಅಸಹಜ ಸಾವು ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿ ಮಣಿಯ ಪತ್ನಿ ನಿಮ್ಮಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.
ಕಳೆದ ದಿವಸ ಇದೇ ಬೇಡಿಕೆಯನ್ನು ಮುಂದಿಟ್ಟು ಹೈಕೋರ್ಟಿಗೆ ಮಣಿಯ ಸಹೋದರ ಅರ್ಜಿಸಲ್ಲಿಸಿದ್ದರು.ತನಿಖೆ ಸಿಬಿಐಗೆ ವಹಿಸಿಕೊಡಲು ಈ ಹಿಂದೆ ಕೇರಳ ಸರಕಾರ ನಿರ್ಧರಿಸಿತ್ತು. ಆದರೆ ಹಾಗೆ ಮಾಡಿಲ್ಲ. ಚಾಲಕ್ಕುಡಿ ಪೊಲೀಸರು ನಡೆಸುವ ತನಿಖೆಯ ಬಗ್ಗೆ ತೃಪ್ತಿಯಿಲ್ಲ ಎಂದು ಅರ್ಜಿಯಲ್ಲಿ ನಿಮ್ಮಿ ಹೇಳಿದ್ದಾರೆ.
ಪ್ರಕರಣದ ದಾಖಲೆಗಳನ್ನು ಸಿಬಿಐಗೆ ಹಸ್ತಾಂತರಿಸಲು ಪೊಲೀಸರಿಗೆ ಸೂಚನೆ ನೀಡಬೇಕೆಂದು ಕೂಡಾ ನಿಮ್ಮಿ ಆಗ್ರಹಿಸಿದ್ದಾರೆ. ಬುಧವಾರ ಕೋರ್ಟು ಅರ್ಜಿಯನ್ನು ವಿಚಾರಣೆಗೆತ್ತಿಕೊಳ್ಳಲಿದೆ ಎಂದು ವರದಿ ತಿಳಿಸಿದೆ.
Next Story





