ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಉಡುಪಿ, ಮಾ.8: ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಎಂಜಿಎಂ ಕಾಲೇಜು ಬಳಿಯಲ್ಲಿ ಇಂದು ನಡೆದಿದೆ.
19 ವರ್ಷದ ಹರೀಶ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ಎಂಜಿಎಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಹರೀಶ್ ಪರೀಕ್ಷಾ ಒತ್ತಡದಿಂದ ಆತ್ಮಹತ್ಯೆಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಮೂಲತಃ ಶಿವಮೊಗ್ಗ ಮೂಲದವನಾಗಿದ್ದ ಹರೀಶ್ ಎಂಜಿಎಂ ಕಾಲೇಜು ಮೈದಾನ ಬಳಿಯ ಬಾಡಿಗೆ ಮನೆಯೊಂದರಲ್ಲಿವಾಸವಿದ್ದರು.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





