ಮಾ.13ರಂದು ಕುಂಬ್ರ ಕೆಐಸಿಯ ಸನದುದಾನ ಸಮ್ಮೇಳನ

ಪುತ್ತೂರು, ಮಾ.8: ಕುಂಬ್ರದ ಕರ್ನಾಟಕ ಇಸ್ಲಾಮಿಕ್ ಅಕಾಡಮಿ(ಕೆಐಸಿ)ಯ ಆಧೀನ ಸಂಸ್ಥೆಯಾದ ಜಾಮಿಯಾ ಅಲ್ ಕೌಸರ್ ಶರೀಅತ್ ಕಾಲೇಜಿನ ದ್ವಿತೀಯ ಸನದುದಾನ ಸಮ್ಮೇಳನ ಮಾ.13ರಂದು ಕುಂಬ್ರ ಕೆಐಸಿ ವಠಾರದಲ್ಲಿ ನಡೆಯಲಿದೆ ಎಂದು ಕೆಐಸಿ ವ್ಯವಸ್ಥಾಪಕ ಕೆ.ಆರ್.ಹುಸೈನ್ ದಾರಿಮಿ ರೆಂಜಲಾಡಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಕರ್ನಾಟಕ ಇಸ್ಲಾಮಿಕ್ ಅಕಾಡಮಿಯ ಗೌರವ ನಿರ್ದೇಶಕ ಅಸ್ಸೈಯದ್ ಅಲಿ ತಂಙಳ್ ಕುಂಬೋಳ್ ದುಆ ನೆರವೇರಿಸುವರು. ಸೈಯದ್ ಎನ್‌ಪಿಎಂ ಝೈನುಲ್ ಆಬಿದೀನ್ ತಂಙಳ್ ಉದ್ಘಾಟಿಸಲಿದ್ದಾರೆ. ಸೈಯದ್ ಪಾಣಕ್ಕಾಡ್ ಹಮೀದಲಿ ಶಿಹಾಬ್ ತಂಙಳ್ ಸನದುದಾನ ನೆರವೇರಿಸಲಿದ್ದಾರೆ. ಕೇರಳ ಮುಶಾವರದ ಉಪಾಧ್ಯಕ್ಷ ಅಲ್ಹಾಜ್ ಕೆಪಿ.ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಪ್ರವಚನ ನೀಡಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಬಹುಮಾನ ವಿತರಣೆ ಮಾಡಲಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಲಾಂಛನ ಬಿಡುಗಡೆ ಮಾಡಲಿದ್ದಾರೆ. ಮಾಜಿ ಸಚಿವ ವಿನಯಕುಮಾರ್ ಸೊರಕೆ ಕೈಪಿಡಿ ಬಿಡುಗಡೆ ಮಾಡಲಿದ್ದಾರೆ. ಹಕೀಂ ಫೈಝಿ ಶಿಕ್ಷಣದ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ.
ಮೂಡಿಗೆರೆ ಖಾಝಿ ಎಂ.ಎ.ಖಾಸಿಂ ಮುಸ್ಲಿಯಾರ್, ಪುತ್ತೂರು ತಾಲೂಕು ಮುಸ್ಲಿಮ್ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಎಸ್.ಇಬ್ರಾಹೀಂ ಕಮ್ಮಾಡಿ, ಮಾಡನ್ನೂರು ನೂರುಲ್ ಹುದಾ ಅಕಾಡಮಿಯ ಪ್ರಾಂಶುಪಾಲ ನ್ಯಾಯವಾದಿ ಹನೀಫ್ ಹುದವಿ ಸೇರಿದಂತೆ ಹಲವಾರು ಧಾರ್ಮಿಕ ಮತ್ತು ಸಾಮಾಜಿಕ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಸಂದರ್ದಲ್ಲಿ 6 ತಿಂಗಳಲ್ಲಿ ಕುರ್‌ಆನ್ ಕಂಠಪಾಠ ಮಾಡಿದ ವಿದ್ಯಾರ್ಥಿ ಹಾಫಿಝ್ ತ್ವಾಹಾ ಸಾಲಿಂ ಅವರನ್ನು ಕೆಐಸಿ ಯುಎಇ ಕೇಂದ್ರ ಸಮಿತಿಯ ಅಧ್ಯಕ್ಷ ಮೊಯ್ದಿನ್ ಕುಟ್ಟಿ ಹಾಜಿ ದಿಬ್ಬ ಸನ್ಮಾನಿಸಿ ಗೌರವಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಐಸಿ ಪ್ರಧಾನ ಕಾರ್ಯದರ್ಶಿ ಕೆ.ಎಂ.ಬಾವಾ ಹಾಜಿ, ಕೋಶಾಧಿಕಾರಿ ಕೆ.ಪಿ. ಸಾದಿಕ್ ಹಾಜಿ ಆಕರ್ಷಣ್, ಟ್ರಸ್ಟಿಗಳಾದ ಅಬ್ದುಲ್ ರಹಿಮಾನ್ ಆಝಾದ್ ಮತ್ತು ಎಲ್.ಟಿ.ಅಬ್ದುಲ್ ರಝಾಕ್ ಹಾಜಿ ಉಪಸ್ಥಿತರಿದ್ದರು.







