ಬುರ್ಜ್ ಖಲೀಫಾಕ್ಕೆ ಅಪ್ಪಳಿಸಿದ ಬೃಹತ್ ಅಲೆಗಳು !

ದುಬೈ, ಮಾ. 8 : ಇಲ್ಲ , ಅಂತಹದ್ದೇನೂ ಸಂಭವಿಸಿಲ್ಲ. ಇದು ರಿಯಲ್ ಅಲ್ಲ ರೀಲ್ !
ಇದು ಜಿಯೋ ಸ್ಟಾರ್ಮ್ ಎಂಬ ಹೊಸ ಹಾಲಿವುಡ್ ಚಿತ್ರದ ಅದ್ಭುತ ಅಷ್ಟೇ ಭಯಾನಕ ಟ್ರೇಲರ್ . ಚಿತ್ರವನ್ನು ವಾರ್ನರ್ ಬ್ರದರ್ಸ್ ಸಂಸ್ಥೆ ಬಿಡುಗಡೆ ಮಾಡುತ್ತಿದೆ.
ಇಡೀ ದುಬೈ ನಗರವನ್ನು ಕಾರ್ಮೋಡ ಆವರಿಸುವುದು , ಬಳಿಕ ನಗರದ ಗಗನಚುಂಬಿ ಕಟ್ಟಡಗಳು ಬೃಹತ್ ಅಲೆಗಳಿಗೆ ಮುಳುಗುವುದನ್ನು ಈ ಟ್ರೇಲರ್ ನಲ್ಲಿ ನಿಜವಾಗಿ ನಡೆದಂತೆ ತೋರಿಸಲಾಗಿದೆ. 2004 ರಲ್ಲಿ ಸುನಾಮಿ ಇಡೀ ನಗರವನ್ನೇ ಸರ್ವನಾಶ ಮಾಡಿದಂತೆ ಮಾಡುವ ಈ ಅಲೆಗಳನ್ನು ಕಂಡು ಜನರು ಭಯಭೀತರಾಗಿ ದಿಕ್ಕಾಪಾಲಾಗಿ ಓಡುವ ದೃಶ್ಯಗಳನ್ನು ತೋರಿಸಲಾಗಿದೆ.
ಆದರೆ ಈ ಟ್ರೇಲರ್ ನಲ್ಲಿ ಇರುವುದು ದುಬೈ ಮಾತ್ರವಲ್ಲ.
ನೈಸರ್ಗಿಕ ವಿಕೋಪಕ್ಕೆ ಮುಂಬೈ, ದುಬೈ, ಮಾಸ್ಕೊ , ರಿಯೋ ಡಿ ಜನೈರೊ ಇತ್ಯಾದಿ ವಿಶ್ವದ ಹಲವು ನಗರಗಳು ಮುಳುಗುವ ಹಲವು ದ್ರಶ್ಯಗಳು ಈ ಟ್ರೇಲರ್ ನಲ್ಲಿವೆ.
ಡೀನ್ ಡೆವಿಲಿನ್ ಬರೆದು , ನಿರ್ಮಿಸಿ, ನಿರ್ದೇಶಿಸಿರುವ ಜಿಯೋ ಸ್ಟಾರ್ಮ್ ನಲ್ಲಿ ಗೆರಾರ್ಡ್ ಬಟ್ಲರ್ ಪ್ರಮುಖ ಪಾತ್ರದಲ್ಲಿದ್ದಾರೆ. ಹವಾಮಾನ ನಿಯಂತ್ರಿಸುವ ಉಪಗ್ರಹಗಳಿಂದ ಉಂಟಾಗುವ ಭಾರೀ ಚಂಡಮಾರುತದಿಂದ ಜಗತ್ತನ್ನು ರಕ್ಷಿಸುವ ಉಪಗ್ರಹ ವಿನ್ಯಾಸಕಾರನ ಪಾತ್ರ ಗೆರಾರ್ಡ್ ಅವರದ್ದು.







