ಅಜ್ಮೀರ್ ದರ್ಗಾ ಬಾಂಬು ಸ್ಪೋಟ ಪ್ರಕರಣ: ಸ್ವಾಮಿ ಅಸೀಮಾನಂದ ದೋಷಮುಕ್ತ

ಜೈಪುರ, ಮಾ.8: ರಾಜಸ್ಥಾನದ ಅಜ್ಮೀರ್ನಲ್ಲಿರುವ ಪ್ರಸಿದ್ಧ ಖ್ವಾಜಾ ಮೊಯಿನುದ್ದಿನ್ ಚಿಸ್ತಿ ದರ್ಗಾ ಸ್ಫೋಟ ಪ್ರಕರಣದಲ್ಲಿ ಸಂಚು ರೂಪಿಸಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಸ್ವಾಮಿ ಅಸೀಮಾನಂದರನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ದೋಷಮುಕ್ತಗೊಳಿಸಿದೆ.
ಎನ್‌ಐಎ ವಿಶೇಷ ನ್ಯಾಯಾಲಯ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇನ್ನೂ ಮೂವರನ್ನು ಅಪರಾಧಿಗಳೆಂದು ತೀಪು ನೀಡಿದೆ.
2007ರ ಅಕ್ಟೋಬರ್ 11 ರಂದು ದರ್ಗಾದಲ್ಲಿ ನಡೆದ ಭೀಕರ ಬಾಂಬು ಸ್ಫೋಟದಲ್ಲಿ ಮೂವರು ಮೃತಪಟ್ಟಿದ್ದರೆ, ಸುಮಾರು 20 ಮಂದಿ ಗಾಯಗೊಂಡಿದ್ದರು.
2011ರಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ ತನಿಖೆಯನ್ನು ಹಸ್ತಾಂತರಿಸಲಾಗಿದ್ದು, ಆರೋಪಿ ಸ್ವಾಮಿ ಅಸೀಮಾನಂದ ಸ್ಫೋಟ ಪ್ರಕರಣದ ಮಾಸ್ಟರ್‌ಮೈಂಡ್ ಎಂದು ಎನ್‌ಐಎ ತನ್ನ ಚಾರ್ಜ್‌ಶೀಟ್‌ನಲ್ಲಿ ನಮೂದಿಸಿತ್ತು.
ಇತರ ಆರು ಆರೋಪಿಗಳ ವಿರುದ್ಧ ಹತ್ಯೆ, ಪಿತೂರಿ, ಬಾಂಬು ಇಟ್ಟು ಸ್ಫೋಟ ಹಾಗೂ ದ್ವೇಷವನ್ನು ಪಸರಿಸಿದ ಆರೋಪವನ್ನು ಎನ್‌ಐಎ ಹೊರಿಸಿತ್ತು.
Next Story