ಕರೋಪಾಡಿ: ಪಂಬತ್ತಾಜೆ-ಪನೆಯಡ್ಕ ಕಾಡಿಗೆ ಆಕಸ್ಮಿಕ ಬೆಂಕಿ

ಬಂಟ್ವಾಳ, ಮಾ. 8: ಕರೋಪಾಡಿ ಗ್ರಾಮದ ಪಂಬತ್ತಾಜೆ-ಪನೆಯಡ್ಕ ಎಂಬಲ್ಲಿ ಆಕಸ್ಮಿಕವಾಗಿ ಕಾಡಿಗೆ ಬೆಂಕಿ ಬಿದ್ದ ಪರಿಣಾಮ ಅಪಾರ ಪ್ರಮಾಣದ ಮರಗಳು ಬೆಂಕಿಗಾಹುತಿಯಾದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಬೆಂಕಿ ಹತ್ತಿದ ಪರಿಣಾಮ ಎಕರೆಗಟ್ಟಲೇ ಅರಣ್ಯದಲ್ಲಿದ್ದ ಮರಗಳು ಬೆಂಕಿಗಾಹುತಿಯಾಗಿದೆ.
ಕೂಡಲೇ ಸ್ಥಳೀಯರು ಬಂಟ್ವಾಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಸ್ಥಳೀಯರು ಸಹಕರಿಸಿದರು.
Next Story





