ದುಂದುವೆಚ್ಚದ ಮದುವೆಗಳಿಗೆ ಕಡಿವಾಣ ಬೀಳಲಿ: ಝೈನಿ ಕಾಮಿಲ್

ಉಳ್ಳಾಲ, ಮಾ.8: ಇಂದಿನ ದಿನಗಳಲ್ಲಿ ಮದುವೆಯ ಹೆಸರಲ್ಲಿ ಅನಗತ್ಯ ಹಣ ಪೋಲು ಮಾಡುವುದು ಅತಿಯಾಗಿದೆ. ಇಂತಹ ಮದುವೆಗಳಿಗೆ ಕಡಿವಾಣ ಬೀಳಬೇಕು. ದುಬಾರಿ ಖರ್ಚಿನಲ್ಲಿ ಮಾಡುವ ಮದುವೆಗಳಿಗೆ ಬದಲಾಗಿ ಸಾಧ್ಯವಾದಷ್ಟು ಸರಳ ವಿವಾಹ ನಡೆಯಲಿ. ಅದರಿಂದ ಉಳಿತಾಯಗೊಂಡ ಹಣವನ್ನು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳ ಹೆಣ್ಣು ಮಕ್ಕಳ ಮದುವೆಗೆ ವ್ಯಯಿಸಬಹುದು. ಇದರಿಂದ ಸಮಾಜದಲ್ಲಿರುವ ಮದುವೆ ಪ್ರಾಯ ಮೀರಿ ಕಣ್ಣೀರು ಸುರಿಸುತ್ತಿರುವ ಸಹೋದರಿಯರ ಬದುಕಿಗೆ ಬೆಳಕಾಗಬಹುದು ಎಂದು ಎಸ್ಸೆಸ್ಸೆಫ್ ರಾಷ್ಟ್ರೀಯ ಮುಖಂಡ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಹೇಳಿದರು.
ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಕುಂಪಲದ ವೈಟ್ ಹೌಸ್‌ನಲ್ಲಿ ಆಯೋಜಿಸಿದ ಸನ್ಮಾನ ಮತ್ತು ಪ್ರತಿನಿಧಿ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್ಸೆಸ್ಸೆಫ್ ಬಡ ಹೆಣ್ಣು ಮಕ್ಕಳ ಮದುವೆಗೆ ಸಹಾಯ, ಬಡ ಕುಟುಂಬಗಳಿಗೆ ಮಾಸಿಕ ರೇಷನ್, ಅನಾಥ ಮಕ್ಕಳಿಗೆ ಸಹಾಯ ವಿತರಿಸುವ ಹಲವು ಸಮಾಜ ಸೇವೆಗಳೊಂದಿಗೆ ಮುನ್ನಡೆಯುತ್ತಿರುವುದು ಪ್ರಶಂಸನೀಯ ಎಂದರು.
ಈ ಸಂದರ್ಭ ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಎನ್.ಕೆ.ಎಂ ಶಾಫಿ ಸಅದಿ ಮತ್ತು ಉಳ್ಳಾಲ ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು ಅವರನ್ನು ಸನ್ಮಾನಿಸಲಾಯಿತು.
ಗೌರವ ಅಧ್ಯಕ್ಷ ಇಕ್ಬಾಲ್ ಹಾಜಿ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಜನ್ ಅಧ್ಯಕ್ಷ ಮುನೀರ್ ಅಹ್ಮದ್ ಸಖಾಫಿ, ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಎಸ್ಸೆಸ್ಸೆಫ್ ತೊಕ್ಕೂಟ್ಟು ಸೆಕ್ಟರ್ ರಿಲೀಫ್ ಸರ್ವಿಸ್‌ನ ಡೈರಕ್ಟರ್ ರಶೀದ್ ಹಾಜಿ ಪಾಂಡೇಶ್ವರ, ಎಸ್‌ವೈಎಸ್ ಉಳ್ಳಾಲ ಸೆಂಟರ್ ಉಪಾಧ್ಯಕ್ಷ ಬಶೀರ್ ಅಹ್ಸನಿ ತೋಡಾರ್, ಉಳ್ಳಾಲ ದರ್ಗಾ ಸಮಿತಿಯ ಮಾಜಿ ಅಧ್ಯಕ್ಷ ಯು.ಎಸ್ ಹಂಝ, ಪಟ್ಲ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಹಾಜಿ ಪಟ್ಲ, ಉಪಾಧ್ಯಕ್ಷ ಮುಹಮ್ಮದ್ ಹಾರಿಸ್ ಪಟ್ಲ, ಉದ್ಯಮಿಗಳಾದ ಯು.ಡಿ ಬದ್ರುದ್ದೀನ್ ಹಾಜಿ, ಹಮೀದ್ ಹಾಜಿ, ಫಾರೂಕ್ ಮಂಚಿಲ, ಎಸ್ಸೆಸ್ಸೆಫ್ ದ.ಕ. ಸಮಿತಿಯ ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯೀಲ್ ಮಾಸ್ಟರ್, ಎಸ್ಸೆಸ್ಸೆಫ್ ಮಂಜೇಶ್ವರ ಡಿವಿಜನ್ ಅಧ್ಯಕ್ಷ ಯಾಕೂಬ್, ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ಸಂಚಾಲಕ ಉಮರಬ್ಬ ತೊಕ್ಕೊಟ್ಟು, ಅಬ್ದುಲ್ ಅನೀಸ್, ಅಳೇಕಳ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಯು.ಡಿ ಅಶ್ರಫ್, ಎಸ್‌ವೈಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಜಲೀಲ್ ತಂಙಳ್ ಉಪಸ್ಥಿತರಿದರು.
ಬಶೀರ್ ಮದನಿ ತೋಡಾರ್ ರಚಿಸಿದ ವಳಿಂಕೋಡು ಉಮಾರ್ ಖಾಝಿರವರ ಜೀವನ ಚರಿತ್ರೆ ಗ್ರಂಥವನ್ನು ಉದ್ಯಮಿ ಏಷ್ಯನ್ ಬಾವ ಹಾಜಿಗೆ ನೀಡುವ ಮೂಲಕ ಬಿಡುಗಡೆಗೊಳಿಸಲಾಯಿತು.
ಉಪಾಧ್ಯಕ್ಷ ಇಮ್ರಾನ್ ಸ್ವಲಾತ್ ನಗರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಾಫರ್ ಯು.ಎಸ್ ವಂದಿಸಿದರು. ಎಸ್ಸೆಸ್ಸೆಫ್ ತೊಕ್ಕೊಟ್ಟು ರಿಲೀಫ್‌ನ ಸಂಚಾಲಕ ಅಲ್ತಾಫ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು.







