ಜಿಂಕೆ ಸಾವು: ಜಿಂಕೆಯನ್ನು ಕಿತ್ತು ತಿಂದ ಕರಡಿಗಳು
ಆನೇಕಲ್ ಮಾ.8: ಬನ್ನೇರುಘಟ್ಟ ಜೈವಿಕ ಉಧ್ಯಾನದ ಕರಡಿ ಸಫಾರಿಯಲ್ಲಿ ಅಚಾನಕ್ ಆಗಿ ಜಿಂಕೆಯೊಂದು ಸಾವನ್ನಪ್ಪಿದೆ. ದಿನಪೂರ್ತಿ ಕದಲದೆ ಬಿದ್ದಿದ್ದ ಜಿಂಕೆಯನ್ನ ಕಂಡ ಕರಡಿಗಳು ಸಹಜವಾಗಿ ಕಿತ್ತು ತಿಂದಿವೆ.
ಇದನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದ ಸಫಾರಿಗೆ ತೆರಳಿದ್ದ ಪ್ರೇಕ್ಷಕರು ಮಾದ್ಯಮದವರಿಗೆ ತಲುಪಿಸಿದ್ದರಿಂದ ಕರಡಿ ದಾಳಿ ಜಿಂಕೆ ಸಾವು ಎಂದು ಸುದ್ದಿ ಬಿತ್ತರಗೊಂಡಿತ್ತು. ಇದನ್ನ ಕಂಡ ಬನ್ನೇರುಘಟ್ಟ ಉದ್ಯಾನ ಮತ್ತು ಕರಡಿ ಸಫಾರಿಯ ಅಧಿಕಾರಿಗಳು ಜಿಂಕೆ ಮೊದಲೇ ಸತ್ತಿತ್ತು ಎಂದು ಸ್ಷಷ್ಟ ಪಡಿಸಿದ್ದಾರೆ.
ಜೊತೆಗೆ ಸಾಮಾನ್ಯವಾಗಿ ಕರಡಿ ಸಫಾರಿಯಲ್ಲಿ ಎಲ್ಲ ಪ್ರಾಣಿಗಳಂತೆ ಜಿಂಕೆಗಳು ಓಡಾಡುತ್ತವೆ. ಇದುವರೆಗೂ ಅಂತಹ ದಾಳಿಗಳು ಕರಡಿಯಿಂದ ನಡೆದಿಲ್ಲ ಎಂದು ಹೇಳಿದ್ದಾರೆ.
ಜಿಂಕೆ ಸಾವಿಗೆ ಕಾರಣ ಅರಿಯಬೇಕಿದೆ ಎಂದು ಕರಡಿ ಸಫಾರಿಯ ವೈದ್ಯರು 'ವಾರ್ತಾಭಾರತಿ' ಗೆ ತಿಳಿಸಿದ್ದಾರೆ.
ಇರುವ 50 ಜಿಂಕೆಗಳಲ್ಲಿ ಯಾವುದೋ ಬೇರೆಯದೆ ಕಾರಣಕ್ಕೆ ಜಿಂಕೆ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ಸ್ಷಷ್ಟನೆ ನೀಡಿದ್ದಾರೆ.
Next Story





