ಸ್ವಚ್ಛತಾ ಜಾಗೃತಿ ಕಾರ್ಯಕ್ರಮ: ಚೆನ್ನೈತ್ತೋಡಿ ಗ್ರಾಮ ಪಂಚಾಯತ್
ಮಂಗಳೂರು, ಮಾ.8: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ನಡೆಯುತ್ತಿರುವ ಱಸ್ವಚ್ಛ ಶಕ್ತಿ ಸಪ್ತಾಹೞಜನಜಾಗೃತಿ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ಚೆನೈತ್ತೋಡಿ ಗ್ರಾಮ ಪಂಚಾಯತ್‌ನಲ್ಲಿ ಮಂಗಳವಾರ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಸ್ವಚ್ಛ ಭಾರತ್ ಮಿಷನ್ ಇದರ ಜಿಲ್ಲಾ ನೆರವು ಘಟಕದ ವತಿಯಿಂದ ಸ್ವಚ್ಛಾತಾ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಬೃಹತ್ ಜನಜಾಗೃತಿ ಜಾಥಾವನ್ನು ಏರ್ಪಡಿಸಲಾಗಿತ್ತು.
ಸ್ಥಳೀಯ ಶಾಲಾ ಮಕ್ಕಳು, ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಸೇವಾ ವಿಭಾಗದ ವಿದ್ಯಾರ್ಥಿಗಳು ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡರು. ಸ್ತ್ರೀ-ಶಕ್ತಿ ಸಂಘದ ಸದಸ್ಯರು, ಯುವಕ-ಯುವತಿ ಮಂಡಳಿ ಸದಸ್ಯರು, ವ್ಯಾಪಾರಸ್ಥರು, ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬಳಿಕ ಶಾಲಾ ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಕುರಿತು ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಇದಲ್ಲದೇ ಪ್ಲಾಸ್ಟಿಕ್ ಕುರಿತು ಜಾಗೃತಿಯನ್ನು ಮೂಡಿಸುವ 'ಭುವಿ' ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ಯತೀಶ್ ಎಂ.ಶೆಟ್ಟಿ, ಉಪಾಧ್ಯಕ್ಷೆ ವಿಶಾಲಾಕ್ಷಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧರ್ಮರಾಜ್ ಪಿ. ಭಾಗವಹಿಸಿದ್ದರು. ಸ್ವಚ್ಛ ಭಾರತ ಮಿಷನ್ ಇದರ ಜಿಲ್ಲಾ ನೆರವು ಘಟಕದ ಐಇಸಿ ಜಿಲ್ಲಾ ಸಮಾಲೋಚಕ ಸಂಶೀರ್, ಸಮುದಾಯ ಅಭಿವೃದ್ಧಿ ಜಿಲ್ಲಾ ಸಮಾಲೋಚಕ ಸತೀಶ್, ಮಾನವ ಸಂಪನ್ಮೂಲ ಅಭಿವೃದ್ಧಿ ಜಿಲ್ಲಾ ಸಮಾಲೋಚಕ ನವೀನ್ ಉಪಸ್ಥಿತರಿದ್ದರು.







