ಮಂಗಳೂರು ರೇಂಜ್ ವಿದ್ಯಾರ್ಥಿ ಫೆಸ್ಟ್ 2017: ಬೆಂಗರೆ ಮದ್ರಸ ಸತತ ಆರನೇ ಬಾರಿ ಚಾಂಪಿಯನ್

ಮಂಗಳೂರು, ಮಾ. 8: ಮಂಗಳೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಇದರ ಅಧೀನದಲ್ಲಿ ಇತ್ತೀಚೆಗೆ ಜೋಕಟ್ಟೆಯಲ್ಲಿ ಎರಡು ದಿನಗಳ ಕಾಲ ನಡೆದ 14ನೇ ಇಸ್ಲಾಮಿಕ್ ಕಲಾ ಸಾಹಿತ್ಯ ಸಾಂಸ್ಕೃತಿಕ ಸ್ಪರ್ಧೆ ಱವಿದ್ಯಾರ್ಥಿ ಫೆಸ್ಟ್-2017ೞರಲ್ಲಿ ಅತ್ಯಧಿಕ ಅಂಕ ಗಳಿಸಿ ಬೆಂಗರೆ ಅಲ್‌ಮದ್ರಸತುದ್ದೀನಿಯ್ಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆಯುವ ಮೂಲಕ ಮಂಗಳೂರು ರೇಂಜ್ ಮಟ್ಟದಲ್ಲಿ ಸತತ ಆರನೇ ಬಾರಿ ಚಾಂಪಿಯನ್ ತನ್ನದಾಗಿಸಿಕೊಂಡಿದೆ.
ಚಾಂಪಿಯನ್ ಪಡೆಯಲು ಕಾರಣಕರ್ತರಾದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಮಂಗಳೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್, ಮಂಗಳೂರು ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್, ಎಸ್ಕೆಎಸ್‌ಬಿ ಬೆಂಗರೆ ಹಾಗೂ ಎ.ಎಂ.ಡಿ. ಮುಅಲ್ಲಿಂಸ್ಟಾಫ್ ಕೌನ್ಸಿಲ್ ಅಭಿನಂದಿಸಿದೆ.
Next Story





