ಆಳ್ವಾಸ್‌ನಲ್ಲಿ ಸಂಸ್ಕೃತೀಯನ್- ಶ್ರೀಲಂಕಾ ಸಾಂಸ್ಕೃತಿಕ ವೈಭವ

ಮೂಡುಬಿದಿರೆ, ಮಾ.8: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೀಲಂಕಾ ಮೂಲದ ವಿದ್ಯಾರ್ಥಿಗಳಿಂದ ‘ಸಂಸ್ಕೃತೀಯನ್ ಶ್ರೀಲಂಕಾನ್ ದಿನಾಚರಣೆ ಹಾಗೂ ಶ್ರೀಲಂಕಾದ ಸಾಂಸ್ಕೃತಿಕ ವೈಭವ ನಡೆಯಿತು.
ತಾಯ್ನಡಿನ ಕಲೆ, ಸಂಸ್ಕೃತಿಯ ರಸದೌತಣ ನೀಡುವ ಉದ್ದೇಶ ಹಾಗೂ ಇತರ ಕಡೆಗಳ ವಿದ್ಯಾರ್ಥಿಗಳಿಗೆ ಶ್ರೀಲಂಕಾದ ಸಂಸ್ಕೃತಿ, ಕಲೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸಂಸ್ಥೆಯ 60 ಮಂದಿ ವಿದ್ಯಾರ್ಥಿಗಳು ಮಂಗಳವಾರ ಸಂಜೆ ಈ ಕಾರ್ಯಕ್ರಮ ನಡೆಸಿಕೊಟ್ಟರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶ್ರೀಲಂಕಾದವರಲ್ಲಿರುವ ದೇಶಾಭಿಮಾನ, ಸಾಂಸ್ಕೃತಿಕ ಪ್ರಜ್ಞೆ ವಿಶ್ವಕ್ಕೆ ಮಾದರಿ. 10ನೇ ತರಗತಿಯವರೆಗೆ ಕಡ್ಡಾಯವಾಗಿ ಸಂಸ್ಕೃತಿ ಅಥವಾ ಶ್ರೀಲಂಕಾದ ದೇಶಿಯ ಕಲೆಯನ್ನು ಕಲಿಯುವ ವ್ಯವಸ್ಥೆಯಿರುವುದರಿಂದ ಶ್ರೀಲಂಕಾದಲ್ಲಿ ಸಾಂಸ್ಕೃತಿಕ ಪ್ರಜ್ಞೆ ಗಟ್ಟಿಯಾಗಿ ಬೇರೂರಲು ಸಾಧ್ಯವಾಗಿದೆ. ಪ್ರವಾಸೋದ್ಯಮದಿಂದಲೂ ಶ್ರೀಲಂಕಾ ಗುರುತಿಸಿಕೊಳ್ಳುತ್ತಿದೆ. ಸಂಸ್ಥೆಯಲ್ಲಿ ವಿವಿಧ ದೇಶಗಳ, ಭಾರತದ ದೇಶಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ವಿವಿಧ ಜಾತಿ ಧರ್ಮಗಳ ಹಬ್ಬಹರಿದಿನಗಳನ್ನು ಆಚರಿಸುತ್ತಿರುವುದು ವಿದ್ಯಾರ್ಥಿಗಳಲ್ಲಿ ನಮ್ಮ ಹಾಗೂ ಇತರ ದೇಶ, ಧರ್ಮ ಬಗ್ಗೆ ಗೌರವ ಹೆಚ್ಚಿಸಲು ಸಾಧ್ಯವಾಗುತ್ತದೆಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಉಪಸ್ಥಿತರಿದ್ದರು.
ಹುತಾತ್ಮ ಯೋಧರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಡಿಪ್ಲೋಮಾ ಪ್ರಮಾಣ ಪತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಕಾಲೇಜಿನ ವಿದ್ಯಾರ್ಥಿಗಳೇ ಪ್ರದರ್ಶಪಡಿಸಿದ ಶ್ರೀಲಂಕಾದ ಪೂಜಾ ನೃತ್ಯ, ಮನಿ ಅಕ್ಕಿತಾ, ಸಾಂಪ್ರದಾಯೀಕ ನೃತ್ಯ, ಜಾನಪದ ನೃತ್ಯ ದಲಾದ ಸಿರಿತಾ, ದೀವಾರ, ಬುಡಕಟ್ಟು ನೃತ್ಯಗಳನ್ನು ಸಾದರಪಡಿಸಿದರು. ಶ್ರೀಲಂಕಾದ ವಿದ್ಯಾರ್ಥಿಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲೇ ಕಲಿತ ಭರತ ನಾಟ್ಯ ಪ್ರದರ್ಶನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಶ್ರೀಲಂಕಾದ ದೇಶದ ಇತಿಹಾಸ, ಅಲ್ಲಿನ ವಿಶೇಷತೆಗಳನ್ನು ಸಾರುವ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.
ಡಿಬೋರ ಸೊಲೆಮೊನ್, ಹಸಿತಾ, ನಿಶಾಲ್ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.







