ಮಹಿಳೆಯರನ್ನು ಗೌರವಿಸಬೇಕು: ಬಿಷಪ್ ಲಾರೆನ್ಸ್ ಮುಕ್ಕುಯಿ

ಬೆಳ್ತಂಗಡಿ, ಮಾ.8: ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಶೋಷಣೆಗಳ ವಿರುದ್ದ ದ್ವನಿಯೆತ್ತುವ ಶೋಷಣೆಗೆ ಒಳಗಾದವರಿಗೆ ನ್ಯಾಯ ಕೊಡಿಸುವ ಕಾರ್ಯ ಮಾಡಬೇಕು. ಸಮಾಜ ಅಸಮಾನತೆಯ ಭಾವನೆಯಿಂದ ಹೊರಬಂದು ಮಹಿಳೆಯರ ಹಿರಿಮೆಯನ್ನು ಗುರುತಿಸಿ ಗೌರವವನ್ನು ಕಾಪಾಡುವ ಕಾರ್ಯವನ್ನು ಮಾಡಿದಾಗ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಉತ್ತಮ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧಮಾಧ್ಯಕ್ಷರಾದ ಬಿಷಪ್ ಲಾರೆನ್ಸ್ ಮುಕ್ಕುಯಿ ಹೇಳಿದರು.
ಅವರು ಬೆಳ್ತಂಗಡಿಯಲ್ಲಿ ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟ ಬೆಳ್ತಂಗಡಿ ಇದರ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಸಮಾವೇಶದಲ್ಲಿ ಆಶೀರ್ವಚನ ನೀಡಿದರು. ಬದಲಾವಣೆಗಾಗಿ ಧೈರ್ಯಶಾಲಿಗಳಾಗಿಎಂಬುದು ಈ ಬಾರಿಯ ಘೋಷಣೆ ಮಹಿಳೆಯರು ಮುಂದೆ ನಿಂತು ಸಮಾಜದಲ್ಲಿ ಹೊಸ ಬದಲಾವಣೆಗಳನ್ನು ತರಬೇಕಾಗಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಬೆಳ್ತಂಗಡಿ ತಾಲೂಕು ಪಂಚಾಯತು ಅಧ್ಯಕ್ಷೆ ದಿವ್ಯಜ್ಯೋತಿ ಮಾತನಾಡಿ ಸರಕಾರಗಳು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಎಲ್ಲ ರೀತಿಯ ನೆರವನ್ನೂ ನೀಡುತ್ತಿದೆ ಇದರ ಸದುಪಯೋಗವನ್ನು ಪಡೆದುಕೊಂಡು ಹೆಣ್ಣು ಮಗುವಿಗೆ ಶಿಕ್ಷಣ ನೀಡಿ ಆಮೂಲಕ ಅವರ ಬೆಳವಣಿಗೆಗ ನೆರವಾಗಿ ಆಗ ಸಮಾಜದಲ್ಲಿ ಹೊಸ ಬದಲಾವಣೆಗಳು ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ನೇಹ ಜ್ಯೋತಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಏಲಿಯಮ್ಮ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ವಿಶೇಷ ಸಾಧನೆಗಾಗಿ ಕಿಲ್ಲೂರಿನ ವೈಧ್ಯೆ ವಾಣಿ ಸುಗುಣಕುಮಾರ್, ಎಸ್ ಎಸ್‌ಎಲ್‌ಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿಹೆಚ್ಚು ಅಂಕ ಪಡೆದ ಮಧುಶ್ರೀ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಧಿಗಳಾಗಿ ಆಗಮಿಸಿದ್ದ ನ್ಯಾಯವಾದಿ ಸ್ವರ್ಣಲತಾ, ತಾಲೂಕು ಪ್ರಕರ್ತರ ಸಂಘದ ಅಧ್ಯಕ್ಷ ದೇವಿ ಪ್ರಸಾದ್, ಫಾ ಬಿನೋಯಿ ಜೋಸೆಫ್ ಮಾತನಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಕಾವೇರಮ್ಮ, ಬೆಳ್ತಂಗಡಿ ಸಂತ ಲರೆನ್ಸ್ ಪ್ರಧಾನ ದೇವಾಲಯದ ಧರ್ಮಗುರು ಜೋಸೆಫ್, ಎಸ್.ಡಿ.ಎಂ ಕಾಲೇಜಿನ ಉಪನ್ಯಾಸಕಿ ಮೇರಿ ಎಂ.ಜೆ, ಡಿಕೆಆರ್‌ಡಿಎಸ್ ನಿರ್ದೇಶಕ ಫಾ. ಜೋಸ್ ಆಯಂಕುಡಿ, ನವಚೈತನ್ಯ ಸ್ವಸಹಾಯ ಸಂಘದ ಅಧ್ಯಕ್ಷೆ ಪ್ರೇಮ ಉಪಸ್ಥಿತರಿದ್ದರು.
ಬೆಳ್ತಂಗಡಿ ನಗರ ಪಂಚಾಯತು ಬಳಿಯಿಂದ ಆರಂಭಗೊಂಡ ಮೆರವಣಿಗೆಗೆ ನಗರ ಪಂಚಾಯತು ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಚಾಲನೆ ನೀಡಿದರು. ಮಹೀಲಾ ಒಕ್ಕೂಟದ ಕಾರ್ಯದರ್ಶಿ ಮಂಜುಳಾ ಸ್ವಾಗತಿಸಿದರು. ಶುಭಾ ಕಾರ್ಯಕ್ರಮ ನಿರ್ವಹಿಸಿದರು, ಜೋಸಿ ವಂದಿಸಿದರು.







