ಮಣಿಪಾಲ: ಸಿಂಡ್ ಬ್ಯಾಂಕಿನಿಂದ ಮಹಿಳಾ ಆ್ಯಪ್ ಬಿಡುಗಡೆ

ಮಣಿಪಾಲ, ಮಾ.8: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರ ಬ್ಯಾಂಕಿಂಗ್ ವ್ಯವಹಾರಕ್ಕಾಗಿಯೇ ರೂಪಿಸಲಾದ 'ಸಿಂಡ್ ಸಹೇಲಿ' ಎಂಬ ಮೊಬೈಲ್ ಆ್ಯಪ್‌ನ್ನು ಇಂದು ಬ್ಯಾಂಕಿನ ಬೆಂಗಳೂರಿನ ಕಾರ್ಪೋರೇಟ್ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಸಿಂಡಿಕೇಟ್ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಸಿಇಓ ಅರುಣ್ ಶ್ರೀವಾಸ್ತವ ಅವರು ಈ ಆ್ಯಪ್‌ನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಆರ್.ಎಸ್.ಪಾಂಡೆ ಹಾಗೂ ಎಸ್.ಎಸ್.ಮಲ್ಲಿಕಾರ್ಜುನ ರಾವ್ , ಜಿಪಂ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಮೊಬೈಲ್ ಆ್ಯಪ್‌ನಲ್ಲಿ ಮಹಿಳೆಯರಿಗಾಗಿ ಹಲವು ಸೌಲಭ್ಯಗಳಿವೆ. ಇವುಗಳಲ್ಲಿ ಸಮೀಪದ ಬ್ಯಾಂಕ್ ಶಾಖೆ ಹಾಗೂ ಎಟಿಎಂ, ಬ್ಯಾಂಕಿನಿಂದ ಮಹಿಳೆಯರಿಗಾಗಿ ಲಭ್ಯವಿರುವ ವಿವಿಧ ಯೋಜನೆಗಳು, ಬ್ಯಾಂಕು ಗ್ರಾಹಕರಿ ಗಾಗಿ ಬಿಡುಗಡೆಗೊಳಿಸಿದ ಯೋಜನೆಗಳು, ಬ್ಯಾಂಕಿನ ಕಾರ್ಯನಿರ್ವಹಣೆಯ ಕುರಿತು ವಿವರ, ರಜೆ, ಕಚೇರಿ ಅವಧಿಯ ಮಾಹಿತಿ, ಶಾಖೆ ಕುರಿತ ವಿವರಗಳನ್ನು ಮನೆಯಿಂದಲೇ ತಿಳಿದುಕೊಳ್ಳಬಹುದು ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.





