ಉಡುಪಿ: ಸಿಂಧುಗೆ ಎಂಬಿಎಯಲ್ಲಿ ಚಿನ್ನದ ಪದಕ

ಉಡುಪಿ,ಮಾ.8: ಉಡುಪಿಯ ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿನಿ ಸಿಂಧು ಎಂ. ಈ ಬಾರಿಯ ಎಂಬಿಎ ಸ್ನಾತಕೋತ್ತರ ಪದವಿ ಪರೀಕ್ಷೆಯ ಮಾರ್ಕೆಟಿಂಗ್ ವಿಶೇಷ ವಿಷಯದೊಂದಿಗೆ ಮಂಗಳೂರು ವಿವಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಸಿಂಧು ಎಂ. ಶಿವಮೊಗ್ಗ ಜಿಲ್ಲೆ ಆಯನೂರಿನ ಮಂಜುನಾಥ್ ಎ.ವಿ. ಹಾಗೂ ಶಾಂತ ಇವರ ಪುತ್ರಿ.
ಕಳೆದ ಮಾ.3ರಂದು ನಡೆದ ಮಂಗಳೂರು ವಿವಿ ಘಟಿಕೋತ್ಸವದಲ್ಲಿ ಸಿಂಧು ಎಂ.ಅವರು ತಮ್ಮ ಈ ಸಾಧನೆಗಾಗಿ ಎನ್. ರಾಘವೇಂದ್ರ ಸ್ಮಾರಕ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಎಂ. ಆರ್. ಹೆಗಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





