ಉಡುಪಿ: 'ನೀರು, ಮರ ಉಳಿಸಿ, ಪಕ್ಷಿಗಳನ್ನು ಪೋಷಿಸಿ' ಕಾರ್ಯಕ್ರಮಕ್ಕೆ ಚಾಲನೆ

ಉಡುಪಿ, ಮಾ.8: ಕಾರ್ಪೊರೇಶನ್ ಬ್ಯಾಂಕ್ ಉಡುಪಿ ಇಂದ್ರಾಳಿ ಶಾಖೆ ವತಿಯಿಂದ 112ನೆ ಸ್ಥಾಪನಾ, ಗ್ರಾಹಕರ ಮತ್ತು ವಿಶ್ವ ಮಹಿಳಾ ದಿನವನ್ನು ಬುಧವಾರ ಶಾಖೆಯಲ್ಲಿ ಆಯೋಜಿಸಲಾಗಿತ್ತು.
ಬ್ಯಾಂಕಿನ ಉಡುಪಿ ವಲಯ ಮುಖ್ಯಸ್ಥ ಡಾ.ರಾಜೇಂದ್ರ ಪ್ರಸಾದ್ ಬ್ಯಾಂಕಿನ ಬಳಿ ಇರುವ ಹಲಸಿನ ಮರದ ಪೋಷಣೆ ಮತ್ತು ಬೇಸಿಗೆಯಲ್ಲಿ ಬರುವ ಹಕ್ಕಿಗಳಿಗೆ ಕುಡಿಯುವ ನೀರನ್ನು ಒದಗಿಸುವ 'ನೀರು, ಮರ ಉಳಿಸಿ, ಪಕ್ಷಿಗಳನ್ನು ಪೋಷಿಸಿ' ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಹಿಳಾ ದಿನಾಚರಣೆಯ ಅಂಗವಾಗಿ ಲೈನ್ ವುಮೆನ್ ಶ್ವೇತಾ ನಾಯ್ಕ, ಮಹಿಳಾ ಅಂಚೆ ವಿತರಕಿ ಪ್ರಮೀಳಾ ಲೋಬೊ ಅವರನ್ನು ಸನ್ಮಾನಿಸಲಾ ಯಿತು. ಜಾನಪದ ಕಲಾರಾಧಕ ಬಿ.ನವೀನ್ ಅವರನ್ನು ಗೌರವಿಸಲಾಯಿತು. ಹಿರಿಯ ನಾಗರಿಕ ಅಬ್ದುಲ್ ಖಾದರ್ ಉಪಸ್ಥಿತರಿದ್ದರು.
ಶಾಖಾ ಪ್ರಬಂಧಕ ಹೇಮಂತ್ ಕಾಂತ್ ಸ್ವಾಗತಿಸಿದರು. ಸಹಾಯಕ ಪ್ರಬಂಧಕ ದಯಾನಂದ ಭಂಡಾರಿ ವಂದಿಸಿದರು. ಸೂರಾಲು ನಾರಾಯಣ ಮಡಿ ಕಾರ್ಯಕ್ರಮ ನಿರೂಪಿಸಿದರು.
Next Story





