ಮಹಿಳೆಗೆ ಶಕ್ತಿ ನೀಡುವ ಕೆಲಸವಾಗಬೇಕು: ನ್ಯಾಯಾಧೀಶ ಸಿ.ಕೆ. ಬಸವರಾಜ್

ಪುತ್ತೂರು, ಮಾ.8: ಮಹಿಳೆಗೆ ಮಾತೆ ಮತ್ತು ಗುರುವಿನ ಸ್ಥಾನ ನೀಡಿರುವ ನಾವು ಆ ಗೌರವವನ್ನು ಉಳಿಸಿಕೊಳ್ಳುವುದರೊಂದಿಗೆ ಆಕೆಗೆ ಶಕ್ತಿಯನ್ನು ನೀಡುವ ಕೆಲಸ ಮಾಡಬೇಕು ಎಂದು ಪುತ್ತೂರು ಸಿವಿಲ್ ಜಡ್ಜ್‌ನ್ಯಾಯಾಲಯದ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಸಿ.ಕೆ. ಬಸವರಾಜ್ ಹೇಳಿದರು.
ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಪುತ್ತೂರು ಹಾಗೂ ಕೊಂಬೆಟ್ಟು ಪ್ರೌಢಶಾಲಾ ಸಹಯೋಗದಲ್ಲಿ ಕೊಂಬೆಟ್ಟ ಸ.ಪ.ಪೂ. ಕಾಲೇಜ್‌ನಲ್ಲಿ ಬುಧವಾರ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹೆಣ್ಣು ಬ್ರೂಣ ಹತ್ಯೆ, ಸ್ತ್ರೀ ಶೋಷಣೆ, ವರದಕ್ಷಿಣೆಯಂತಹ ಪಿಡುಗು ಹೆಣ್ಣಿನ ಬದುಕಿಗೆ ಮಾರಕವಾಗಿದ್ದು. ಇದನ್ನು ತೊಡೆದು ಹಾಕಲು ಎಲ್ಲರೂ ಪ್ರಯತ್ನಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ಮಾತನಾಡಿ ಮಹಿಳೆಯರ ಬಗ್ಗೆ ಲಿಂಗತಾರತಮ್ಯ, ಬೇಧಭಾವ ಮಾಡದೆ ಅವರ ಬೆಳವಣಿಗೆಯಲ್ಲಿ ಮುಕ್ತ ವಾತಾವರಣ ಕಲ್ಪಿಸಬೇಕು ಎಂದರು.
ವಕೀಲೆ ಹರಿಣಾಕ್ಷಿ ಜೆ. ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಭಾವಹಿಸಿ ಮಹಿಳೆ ಮತ್ತು ಕಾನೂನು ವಿಚಾರದಲ್ಲಿ ಮಾಹಿತಿ ನೀಡಿದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ವಕೀಲ ಮಹೇಶ್ ಕಜೆ, ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಉದಯಶಂಕರ ಶೆಟ್ಟಿ, ಕಾಲೇಜ್‌ನ ಉಪ ಪ್ರಾಂಶುಪಾಲ ಎಚ್.ಶಿವರಾಮ ಹೆಬ್ಬಾರ್, ಶಿಕ್ಷಖಿ ಅರುಣಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜೋಕಿಂ ಡಿಸೋಜ, ವಕೀಲರ ಸಂಘದ ಕಾರ್ಯದರ್ಶಿ ದೀಪಕ್ ಬೊಳುವಾರು, ವಕೀಲೆ ಸಾಯಿರಾ ಜುಬೇರ್ ಮತ್ತಿತರರು ಉಪಸ್ಥಿತರಿದ್ದರು. ಚಿದಾನಂದ ಕಾಮತ್ ಕಾಸರಗೋಡು ಸ್ವಾಗತಿಸಿದರು. ಶಿಕ್ಷಕ ಕೆ. ಜಗನ್ನಾಥ ರೈ ವಂದಿಸಿದರು.







