‘100ಕ್ಕೂ ಅಧಿಕ ಜಿಲ್ಲೆಗಳು ಬಯಲು ಶೌಚ ಮುಕ್ತ’
ಹೊಸದಿಲ್ಲಿ, ಮಾ.8: ಸ್ವಚ್ಛಭಾರತ ಮಿಶನ್ ಒಂದು ಸಾಮೂಹಿಕ ಚಳವಳಿಯಾಗಿ ಮಾರ್ಪಟ್ಟಿದ್ದು, ದೇಶಾದ್ಯಂತ 100ಕ್ಕೂ ಅಧಿಕ ಜಿಲ್ಲೆಗಳನ್ನು ಬಯಲು ಶೌಚ ಮುಕ್ತ (ಓಡಿಎಫ್)ವೆಂದು ಘೋಷಿಸಲಾಗಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಿಳಿಸಿದ್ದಾರೆ.
‘‘ಸ್ವಚ್ಛ ಭಾರತ ಮಿಶನ್ ಈಗ ಒಂದು ಸಾಮೂಹಿಕ ಚಳವಳಿಯಾಗಿರುವುದು ನನಗೆ ಸಂತಸ ತಂದಿದೆ. ಇದೀಗ 100ಕ್ಕೂ ಅಧಿಕ ಜಿಲ್ಲೆಗಳು ಬಯಲು ಶೌಚದಿಂದ ಮುಕ್ತವಾಗಿವೆ’’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ದೇಶದಲ್ಲಿ ಬಯಲು ಶೌಚಮುಕ್ತ ಮೂರು ರಾಜ್ಯಗಳು, 101 ಜಿಲ್ಲೆಗಳು ಹಾಗೂ 1,67,225 ಗ್ರಾಮಗಳಿವೆ. ಒಟ್ಟು 34,879,320 ಶೌಚಗೃಹಗಳನ್ನು ಮನೆಗಳಲ್ಲಿ ನಿರ್ಮಿಸಲಾಗಿದೆಯೆಂದು ಮೋದಿ ಟ್ವೀಟರ್‌ನಲ್ಲಿ ಪ್ರಸಾರ ಮಾಡಿದ ಸಂದೇಶದಲ್ಲಿ ತಿಳಿಸಿದ್ದಾರೆ.
2019ರೊಳಗೆ ದೇಶದಲ್ಲಿ ಬಯಲು ಶೌಚಾಲಯವನ್ನು ನಿರ್ಮೂಲನೆಗೊಳಿಸುವ ಗುರಿಯೊಂದಿಗೆ ಪ್ರಧಾನಿಯವರು 2014ರ ಅಕ್ಟೋಬರ್ 2ರಂದು ಸ್ವಚ್ಛ ಭಾರತ್ ಮಿಶನ್ ಅನ್ನು ಆರಂಭಿಸಿದ್ದರು.
Next Story





