ಜಯಲಲಿತಾ ಸಾವಿನ ತನಿಖೆಗೆ ಆಗ್ರಹಿಸಿ ಪನ್ನೀರ್‌ಸೆಲ್ವಂ ಉಪವಾಸ ಮುಷ್ಕರ
ಚೆನ್ನೈ, ಮಾ.8: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಒ.ಪಿ.ಪನ್ನೀರ್‌ಸೆಲ್ವಂ ಅವರು ದಿ.ಜೆ.ಜಯಲಲಿತಾ ಅವರ ಸಾವಿನ ಕುರಿತು ಸ್ವತಂತ್ರ ತನಿಖೆಗೆ ಆಗ್ರಹದೊಂದಿಗೆ ಇಂದು ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
ಎಗ್ಮೋರ್‌ನ ರಾಜರತ್ನಂ ಸ್ಟೇಡಿಯಮ್‌ನಲ್ಲಿ ಪನ್ನೀರ್‌ಸೆಲ್ವಂ ಅವರು ಬುಧವಾರ ಬೆಳಿಗ್ಗೆ ನಿರಶನವನ್ನು ಆರಂಭಿಸಿದ್ದು, ಎಐಎಡಿಎಂಕೆಯ ಬಂಡುಕೋರ ಶಾಸಕರು ಮತ್ತು ಪನ್ನೀರ್‌ಗೆ ನಿಷ್ಠರಾಗಿರುವ ಹಿರಿಯ ನಾಯಕರೂ ಪಾಲ್ಗೊಂಡಿದ್ದಾರೆ. ಸೆಲ್ವಂ ಬಣದ ಕಾರ್ಯಕರ್ತರು ಜಯಾ ಸಾವಿನ ತನಿಖೆಗೆ ಆಗ್ರಹಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ನಿರಶನ ನಡೆಸುತ್ತಿದ್ದಾರೆ.
ಜಯಾಲಲಿತಾ ಅವರದು ಸಹಜ ಸಾವೇ ಎಂಬ ಬಗ್ಗೆ ಜನರಲ್ಲಿ ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಇನ್ನೂ ಅನುಮಾನಗಳಿವೆ ಎಂದು ಎಐಎಡಿಎಂಕೆ ರಾಜ್ಯಸಭಾ ಸದಸ್ಯ ವಿ.ಮೈತ್ರೇಯನ್ ಹೇಳಿದರು.
Next Story





