ಸದಾ ತನ್ನ ವಿರುದ್ಧ ಆರೋಪ ಮಾಡುವ ಕೇಜ್ರಿವಾಲ್ ಗೆ ರಾಬರ್ಟ್ ವಾದ್ರಾ ಹಾಕಿದ ಸವಾಲು ಏನು ನೋಡಿ

ಹೊಸದಿಲ್ಲಿ : ಸದಾ ತನ್ನ ವಿರುದ್ಧ ಏನಾದರೂ ಆರೋಪ ಮಾಡುವ ಎಎಪಿ ನಾಯಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ‘‘ನನ್ನ ಬಗ್ಗೆ ವಿಚಿತ್ರ ಗೀಳು ಹುಟ್ಟಿಕೊಂಡಿದೆ’’ ಎಂದು ಉದ್ಯಮಿ ರಾಬರ್ಟ್ ವಾದ್ರಾ ಅವರು ಕೇಜ್ರಿಯನ್ನು ಕಟುವಾಗಿ ಟೀಕಿಸಿದ್ದಾರೆ.
‘‘ರಾಬರ್ಟ್ ವಾದ್ರಾ’’ ಅವರು ದಿಲ್ಲಿ ಮುಖ್ಯಮಂತ್ರಿಯ ಶಬ್ದಕೋಶದಲ್ಲಿ ಅತ್ಯಂತ ಹೆಚ್ಚು ಉಲ್ಲೇಖವಾಗುವ ಹೆಸರು’’ ಎಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯೊಂದರಲ್ಲಿ ವರದಿ ಬಂದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ಪ್ರತಿಕ್ರಿಯಿಸಿದ ಅವರು ‘‘ವಾದ್ರಾ ಅವರನ್ನು ಜೀವಂತ ತಿಂದು ಬಿಡಬಹುದು’’ ಎಂಬ ಅವರ ಮಾತುಗಳು ಅವರು ನನ್ನ ಬಗ್ಗೆ ವಿಚಿತ್ರ ಗೀಳು ಹೊಂದಿದ್ದಾರೆಂದು ತಿಳಿಸುತ್ತದೆ. ದಿಲ್ಲಿ ಮುಖ್ಯಮಂತ್ರಿ ನನ್ನ ಬಳಿ ಬಂದು ನೇರವಾಗಿ ಮಾತನಾಡಬೇಕೆಂಬ ಮನವಿ ನನ್ನದು. ಅವರ ಎಲ್ಲಾ ಆರೋಪಗಳ ಮುಖಾಂತರ ಬೇರೆಯವರನ್ನು ಬಡಿದೆಬ್ಬಿಸುವ ಬದಲು ನನ್ನೊಂದಿಗೆ ಅವರು ಮಾತನಾಡಲಿ. ದಿಲ್ಲಿ ಮುಖ್ಯಮಂತ್ರಿಯ ಎಲ್ಲಾ ಪ್ರಯತ್ನಗಳಿಗೂ ನನ್ನ ಶುಭ ಹಾರೈಕೆಗಳು,’’ ಎಂದು ಬರೆದಿದ್ದಾರೆ.
‘‘ನೀವು ಸತ್ಯೇಂದರ್ ಜೈನ್ ಅವರನ್ನು ಮಾತ್ರ ಬಂಧಿಸಬಹುದು, ದೀಕ್ಷಿತ್ ಅವರನ್ನಲ್ಲ. ಪ್ರಧಾನಿ ಅವರು ರಾಬರ್ಟ್ ವಾದ್ರಾ ಅವರ ವಿರುದ್ಧ ಬೆರಳೆತ್ತಿದರೆ, ಅವರಿಗೆ 56 ಇಂಚಿನ ಎದೆಯಿದೆಯೆಂದು ನನಗೆ ಮನವರಿಕೆಯಾಗುತ್ತದೆ. ವಾದ್ರಾ ಅವರನ್ನು ಜೀವಂತ ತಿಂದು ಬಿಡುತ್ತಾರೆ. ನಮ್ಮನ್ನು ಆಯ್ಕೆ ಮಾಡಿದ್ದಕ್ಕಾಗಿ ಅವರು ದಿಲ್ಲಿಯ ಜನರ ವಿರುದ್ಧ ಸೇಡು ತೀರಿಸುತ್ತಿದ್ದಾರೆ. ಎಲ್ಲಾ ಅಡೆತಡೆಗಳ ಹೊರತಾಗಿ ನಾವು ಇಷ್ಟು ಸಾಧಿಸಿದ್ದೇವೆ,’’ಎಎಪಿ ಶಾಸಕ ಸತ್ಯೇಂದರ್ ಜೈನ್ ಅವರನ್ನು ಟೀಕಿಸಿದ ಪ್ರಧಾನಿ ಮೋದಿಯನ್ನು ಗುರಿಯಾಗಿಸಿ ಕೇಜ್ರಿವಾಲ್ ಅವರು ಹೇಳಿದ್ದಕ್ಕೆ ಪ್ರತಿಕ್ರಿಯೆಯಾಗಿ ವಾದ್ರಾ ಮೇಲಿನಂತೆ ಹೇಳಿದ್ದಾರೆ.