ಮಾ.11-12ರಂದು ಪಕ್ಕಲಡ್ಕ ಪತ್ತ್ ಮಾಙ ಜಾರ ಮಖಾಂ ಉರೂಸ್ ಸಮಾರೋಪ
ಮಂಗಳೂರು, ಮಾ.9: ಪಕ್ಕಲಡ್ಕ ಮಖಾಂ ಉದಯಾಸ್ತಮಾನ ಉರೂಸ್ ಮಾ.11 ಮತ್ತು 12ರಂದು ನಡೆಯಲಿದೆ. ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಖಾಝಿ ತ್ವಾಖ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಸಮಸ್ತ ಉಪಾಧ್ಯಕ್ಷ ಮಿತ್ತಬೈಲ್ ಜಬ್ಬಾರ್ ಉಸ್ತಾದ್ ಉದ್ಘಾಟಿಸಲಿದ್ದಾರೆ. ನಝೀರ್ ಅಝ್ಹರಿ ಬೊಳ್ಮಿನಾರ್ ಮುಖ್ಯ ಭಾಷಣಗೈಯಲಿದ್ದಾರೆ. ನಜ್ಮುದ್ದೀನ್ ಪೂಕೋಯ ತಂಙಳ್ ದುವಾ ನೇತೃತ್ವ ವಹಿಸಲಿದ್ದಾರೆ.
ತ್ವಾಹ ಜಿಫ್ರಿ ತಂಙಳ್, ಝೈನುಲ್ ಆಬಿದೀನ್ ತಂಙಳ್ ಪೋಸೋಟು ಸ್ವಲಾತ್ ಮಜ್ಲಿಸ್ ಗೆ ನೇತೃತ್ವ ವಹಿಸಲಿದ್ದಾರೆ. ಶಾಸಕ ಜೆ.ಆರ್ ಲೋಬೊ, ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಲ್ವ, ಅಬ್ದುಲ್ ರವೂಫ್, ಡಾಕ್ಟರ್ ಝೈನುದ್ದೀನ್ ಮುಂತಾದ ಸಾಮಾಜಿಕ ಧಾರ್ಮಿಕ ನಾಯಕರು ಭಾಗವಹಿಸಲಿದ್ದಾರೆ ಎಂದು ಖತೀಬರಾದ ನಝೀರ್ ಅಝ್ಹರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





