ಶಾರ್ಜ : ಮುಚ್ಚಿದ ಸೂಪರ್ ಮಾರ್ಕೆಟ್ - ಭಾರತದ 50ರಷ್ಟು ಉದ್ಯೋಗಿಗಗಳು ಅತಂತ್ರ

ಶಾರ್ಜ,ಮಾ. 9: ಕೇರಳದ ವ್ಯಕ್ತಿಯ ಮಾಲಕತ್ವದ ಸೂಪರ್‌ಮಾರ್ಕೆಟ್‌ಗಳು ಮುಚ್ಚಿದ್ದರಿಂದ ಐವತ್ತರಷ್ಟು ಕೆಲಸಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಾರ್ಜ, ದುಬೈಗಳಲ್ಲಿ ಈ ವ್ಯಕ್ತಿಯ ಮಾಲಕತ್ವದ ಸೂಪರ್ ಮಾರ್ಕೆಟ್‌ಗಳಿವೆ. ಮಾರ್ಚ್ ಆರಂಭದಲ್ಲಿ ಅನಿರೀಕ್ಷಿತವಾಗಿ ಮಾಲಕ ಸೂಪರ್ ಮಾರ್ಕೆಟ್ ಮುಚ್ಚಿಸಿದ್ದಾನೆ. ಶಾರ್ಜದಲ್ಲಿ ನಾಲ್ಕು ಸೂಪರ್‌ಮಾರ್ಕೆಟ್‌ಗಳು ಮುಚ್ಚಿವೆ. ಮಾಲಕನಿಗೆ ಕರೆ ಮಾಡಿದರೆ ಆತ ಸ್ಪಂದಿಸಿಲ್ಲ. ಆದ್ದರಿಂದ ಕೆಲಸಗಾರರು ಕಾರ್ಮಿಕ ಸಚಿವಾಲಯಕ್ಕೆ ದೂರು ನೀಡಿದ್ದಾರೆ. ಸಂಸ್ಥೆ ಮುಚ್ಚಿರುವುದರಿಂದ ಆಹಾರ ವಸ್ತುಗಳನ್ನು ಕೂಡಾ ತೆಗೆದುಕೊಳ್ಳಲು ಕೆಲಸ ಗಾರರಿಂದ ಆಗಿಲ್ಲ. ಕೆಲವು ದಿವಸಗಳಿಂದ ಆಹಾರಕ್ಕೂ ತತ್ವಾರವಾಗಿದೆ. ವಾಸಸ್ಥಳದ ನೀರು,ವಿದ್ಯುತ್ ಕಡಿತಗೊಳಿಸಲಾಗಿತ್ತು.
ಕಟ್ಟಡ ಮಾಲಕರಿಗೆ ದುಂಬಾಲು ಬಿದ್ದು ಅದನ್ನು ಸರಿಪಡಿಸಲಾಗಿದೆ. ಪಾಸ್ ಪೋರ್ಟ್ ಇತರ ದಾಖಲೆಗಳು ಮುಖ್ಯ ಕಚೇರಿಯಲ್ಲಿದೆ. ಅದು ಕೂಡಾ ಮುಚ್ಚಿರುವುದರಿಂದ ಅದು ಕೂಡಾ ಕೆಲಸಗಾರಿಗೆ ಅಲಭ್ಯವಾಗಿದೆ. ಊರಿಗೆ ಹೋಗುವುದಕ್ಕೂ ಕೂಡಾ ಸಾಧ್ಯವಾಗಿಲ್ಲ. ಹೆಚ್ಚಿನ ಕೆಲಸಗಾರರು ಕೇರಳದವರಾಗಿದ್ದು, ದಿಲ್ಲಿ, ಉತ್ತರಪ್ರದೇಶದ ತಲಾ ಒಬ್ಬರು ಮತ್ತು ನಾಲ್ವರು ಫಿಲಿಪ್ಪೀನ್ಸ್ ಮಹಿಳೆಯರು ಸೂಪರ್‌ಮಾರ್ಕೆಟ್‌ನಲ್ಲಿ ಕೆಲಸಕ್ಕಿದ್ದಾರೆ. ಇನ್ನು ಕೆಲವರು ರಜೆಯಲ್ಲಿ ಊರಿಗೆ ಹೋಗಿದ್ದಾರೆ. ಕೆಲಸಗಾರರು ಎಂದಿನಂತೆ ಕೆಲಸಕ್ಕೆ ಹೋದಾಗ ಸೂಪರ್ ಮಾರ್ಕೆಟ್ ಮುಚ್ಚಿದ್ದು ಕಂಡು ಬಂದಿದೆ. ಮಾಲಕ ಈ ಕುರಿತು ಯಾವುದೇ ಸೂಚನೆಯನ್ನು ನೀಡಿರಲಿಲ್ಲ.
ಮಾಲಕನಿಗೆ ಕರೆಮಾಡಿದರೂ ಮೊಬೈಲ್ ಬಂದಾಗಿದೆ. ಕಾರ್ಮಿಕ ಇಲಾಖೆಯಲ್ಲಿ ದೂರು ನೀಡಲಾದರೂ ತೀರ್ಪು ಬರುವವರೆಗೆ ಕೆಲಸಗಾರರು ಅಲ್ಲಿರಲೇ ಬೇಕಾಗುತ್ತದೆ. ಅಷ್ಟರವರೆಗೆ ಇವರಿಗೆ ಯಾರಾದರೂ ನೆರವು ನೀಡಿದರೆ ಮಾತ್ರ ಶಾರ್ಜದಲ್ಲಿರಲು ಸಾಧ್ಯವಿದೆ. ಯುಎಇಯ ಸಮಾಜ ಸೇವಾ ಸಂಘಟನೆಗಳ ನೆರವಿನ ನಿರೀಕ್ಷೆಯಲ್ಲಿ ಇವರು ದಿನದೂಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.







