ರೈತರ ಸಾಲ ಮನ್ನಾ ಒತ್ತಾಯಿಸಿ ಬಿಜೆಪಿಯಿಂದ ಮನವಿ

ಮೂಡುಬಿದಿರೆ,ಮಾ.09 : ಬರ ಪರಿಸ್ಥಿತಿಯಿಂದ ಸಂಕಷ್ಟಕ್ಕೀಡಾಗಿರುವ ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿಯೊಂದನ್ನು ಮೂಡುಬಿದಿರೆ ಮುಲ್ಕಿ ವಿಧಾನಸಭಾ ಕ್ಷೇತ್ರ ಬಿಜೆಪಿಯು ಗುರುವಾರ ಮೂಡುಬಿದಿರೆ ತಹಸೀಲ್ದಾರ್ ಮೂಲಕ ಮನವಿಯೊಂದನ್ನು ಸಲ್ಲಿಸಿದೆ.
ರಾಜ್ಯಾದಾದ್ಯಂತ ಬರಪರಿಸ್ಥಿತಿಯಿಂದಾಗಿ ರೈತರು ಕಂಗಾಲಾಗಿದ್ದು, ಕೂಡಲೇ ಅವರಿಗೆ ನೆರವು ನೀಡಬೇಕು. ಬಜೆಟ್‌ನಲ್ಲಿ ಸಾಲಮನ್ನಾ ಮಾಡಲು ಹಣ ಮೀಸಲಿಡಬೇಕು. ಮೇವಿನ ಕೊರತೆಯಿಂದಾಗಿ ರೈತರ ಗೋವುಗಳು ಸಾವಿಗೀಡಾಗುತ್ತಿದೆ. ಅಲ್ಲಲ್ಲಿ ಗೋಶಾಲೆಗಳನ್ನು ತೆರೆದು ಮೇವು ಪೂರೈಸುವ ಕ್ರಮಕೈಗೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆಯಿರುವ ಪ್ರದೇಶಗಳಿಗೆ ನೀರಿನ ಸೌಲಭ್ಯವನ್ನು ನೀಡಬೇಕು ಎಂಬುದಾಗಿ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ನೀಡಿದ ಸಂದರ್ಭ ಬಿಜೆಪಿ ಮಂಡಲ ಅಧ್ಯಕ್ಷರಾದ ಈಶ್ವರ ಕಟೀಲ್, ಕಾರ್ಯದರ್ಶಿ ಸುಖೇಶ್ ಶೆಟ್ಟಿ ಶಿರ್ತಾಡಿ, ದ.ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೆ.ಪಿ. ಜಗದೀಶ ಅಧಿಕಾರಿ, ಜಿಲ್ಲಾ ಕಾರ್ಯದರ್ಶಿ ಸುದರ್ಶನ ಎಂ., ಜಿ.ಪಂ. ಸದಸ್ಯ ಸುಚರಿತ ಶೆಟ್ಟಿ, ಪುರಸಭಾ ಸದಸ್ಯರಾದ ಬಾಹುಬಲಿ ಪ್ರಸಾದ್, ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಜೋಯ್ಲಸ್ ಡಿಸೋಜಾ, ಕೆ.ಆರ್. ಪಂಡಿತ್, ಪ್ರಸಾದ್ ಕುಮಾರ್, ಮೇಘನಾಥ ಶೆಟ್ಟಿ, ಶಶಿಧರ ಅಂಚನ್, ಜಯಂತ್ ಹೆಗ್ಡೆ, ಹಿಂದುಳಿದ ವರ್ಗ ಮೋರ್ಚಾದ ಗೋಪಾಲ್ ಶೆಟ್ಟಿಗಾರ್, ರೈತ ಮೋರ್ಚಾದ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಶಕ್ತಿಕೇಂದ್ರದ ರಮೇಶ್, ಹರೀಶ್ ಎಮ್.ಕೆ., ಸಂತೋಷ್, ಉಪಸ್ಥಿತರಿದ್ದರು.







