ಲೋಕಸಭೆಯಲ್ಲಿ ಹೆರಿಗೆ ಸೌಲಭ್ಯ ವಿಧೇಯಕ ಮಂಡನೆ

ಹೊಸದಿಲ್ಲಿ, ಮಾ.9: ಲೋಕಸಭೆಯಲ್ಲಿ ಇಂದು ಹೆರಿಗೆ ಸೌಲಭ್ಯ ವಿಧೇಯಕ 2016ನ್ನು ಮಂಡಿಸಲಾಯಿತು.ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಲೋಕಸಭೆಯಲ್ಲಿ ಹೆರಿಗೆ ಸೌಲಭ್ಯ ತಿದ್ದುಪಡಿ ವಿಧೇಯಕ 2016ನ್ನು ಮಂಡಿಸಿದರು.
ನೂತನ ವಿಧೇಯಕದಲ್ಲಿ ಮಹಿಳಾ ಉದ್ಯೋಗಿಗಳ ಹೆರಿಗೆ ರಜೆಯನ್ನು 12 ವಾರಗಳಿಂದ 26 ವಾರಗಳಿಗೆ ಏರಿಕೆ ಮಾಡಲಾಗಿದೆ.
ವೈಯಕ್ತಿಕ ಬದುಕು ಮತ್ತು ವೃತ್ತಿಜೀವನ ನಡುವೆ ಸಮತೋಲನಕ್ಕೆ ನೂತನ ಬಿಲ್ ಸಹಕಾರಿಯಾಗಲಿದ್ದು, ಹೆರಿಗೆಯಾದ ಮಹಿಳೆಗೆ ವಿಶೇಷ ಸಂದರ್ಭದಲ್ಲಿ ಮನೆಯಿಂದಲೇ ಕೆಲಸಕ್ಕೆ ಅವಕಾಶ ಕಲ್ಪಿಸಲಾಗಿದೆ. ರಾಜ್ಯಸಭೆಯಲ್ಲಿ ಈ ಬಿಲ್ ಅಂಗೀಕಾರಗೊಂಡಿದೆ
Next Story