ಐರನ್ ಮಾತ್ರೆ ಸೇವಿಸಿ 11 ವಿದ್ಯಾರ್ಥಿಗಳು ಅಸ್ವಸ್ತ

ಬಾಗೇಪಲ್ಲಿ, ಮಾ.9: ಬಿಸಿಯೂಟ ಸೇವನೆಯ ನಂತರ ಐರನ್ ಮಾತ್ರೆ ತಿಂದ 11 ಶಾಲಾ ವಿದ್ಯಾರ್ಥಿಗಳು ವಾಂತಿಯಾಗಿ ತೀವ್ರ ಅಶ್ವಸ್ಥರಾಗಿರುವ ಘಟನೆ ತಾಲೂಕಿನ ಮಿಟ್ಟೇಮರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದಿದೆ.
ಶಾಲೆಯ ವಿದ್ಯಾರ್ಥಿಗಳು ಮದ್ಯಾಹ್ನದ ಬಿಯೂಟವನ್ನು ಸೇವನೆಯ ನಂತರ ಐರನ್ ಮಾತ್ರೆಗಳನ್ನು ತಿಂದ ಸ್ವಲ್ಪ ಸಮಯದ ನಂತರ ಸುಮಾರು 11 ಮಂದಿ ಮಕ್ಕಳಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡು ವಾಂತಿಯಾಗಿ ಅಶ್ವಸ್ಥರಾಗಿ ಮಿಟ್ಟೇಮರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಆಸ್ಪತ್ರೆಯ ವೈದ್ಯರು ಚಿಕ್ಸಿತೆ ನೀಡಿದ ಪರಿಣಾಮ ಎಲ್ಲಾ 11 ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸತ್ಯನಾರಾಯಣರೆಡ್ಡಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ನೀಡುವಂತಹ ಐರನ್ ಮಾತ್ರೆ ತಿನ್ನುವುದರಿಂದ ಕೆಲವರಿಗೆ ಹೊಟ್ಟೆ ನೋವು ಸಹಜವಾಗಿ ಕಾಣಿಸಿಕೊಳ್ಳುತ್ತೆ. ಈ ಸಂಬಂಧ ಬಿಸಿಯೂಟದಲ್ಲಿ ವಿಷಯುಕ್ತ ಆಹಾರ ಸೇವನೆಯಿಂದ ತೊಂದರೆಯಾಗಿದೆಯೇ ಎಂಬುದು ಇನ್ನು ಮಾಹಿತಿ ಇಲ್ಲ, ಆಹಾರವನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಫಲಿಂತಾಂಶ ಬಂದ ನಂತರವೇ ಸತ್ಯಾಂಶ ಹೊರಬೀಳಲಿದೆ ಎಂದರು.





