ರಾಜಕೀಯ ದ್ವೇಷದಿಂದ ಇಬ್ಬರ ಮೇಲೆ ಹಲ್ಲೆ

ನಾಗಮಂಗಲ, ಮಾ.9: ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಶಾಸಕ ಚಲುವರಾಯಸ್ವಾಮಿ ಬೆಂಬಲಿಗರು ಮಾಜಿ ಶಾಸಕ ಸುರೇಶ್‌ಗೌಡ ಬೆಂಬಲಿಗರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಮಾಜಿ ಶಾಸಕ ಸುರೇಶ್‌ಗೌಡ ಅಭಿಮಾನಿ ಸಂಘದ ಅಧ್ಯಕ್ಷ ಹಾಗೂ ಪಟ್ಟಣ ಪಂಚಾಯತ್ ನಾಮನಿದೇರ್ಶಿತ ಸದಸ್ಯ ಪ್ರವೀಣ್‌ಕುಮಾರ್ ಮತ್ತು ಸಂತೋಷ್ ಎಂಬುವವರು ಹಲ್ಲೆಗೊಳಗಾದವರೆಂದು ಪೊಲೀಸರಿಗೆ ದೂರು ನೀಡಲಾಗಿದೆ.
ತಾಲೂಕಿನ ಗಡಿ ಬಸರಾಳು ಸಮೀಪ ಬುಧವಾರ ತಡರಾತ್ರಿ ಶಾಸಕ ಚಲುವರಾಯಸ್ವಾಮಿ ಬೆಂಬಲಿಗ ತಾಪಂ ಮಾಜಿ ಅಧ್ಯಕ್ಷ ಎನ್.ಸಿ.ರಮೇಶ್ ಪುತ್ರ ವಿನಯ್‌ಕುಮಾರ್ ಮತ್ತು ಬೆಂಬಲಿಗರು ಈ ಹಲ್ಲೆ ನಡೆಸಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬಸರಾಳು ಸಮೀಪದ ಕೆಂಚನಹಳ್ಳಿಗೆ ಹಬ್ಬಕ್ಕೆಂದು ತೆರಳಿದ್ದ ಚಲುವರಾಯಸ್ವಾಮಿ ಮತ್ತು ಸುರೇಶ್‌ಗೌಡ ಬೆಂಬಲಿಗರ ನಡುವೆ ಈಚೆಗೆ ನಡೆದ ಪಟ್ಟಣ ಪಂಚಾಯತ್‌ನ ಉಪಚುನಾವಣೆಯ ವಿಚಾರದಲ್ಲಿ ಪರಸ್ಪರ ಜಗಳವಾಗಿ ಈ ಹಲ್ಲೆ ನಡೆದಿದೆ ಎನ್ನಲಾಗಿದೆ.
Next Story





